ಮೀರತ್ (ಉತ್ತರಪ್ರದೇಶ): ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯ ಸೇರಿ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ: ಮಾರ್ಚ್22 ರಂದು ಆರೋಪಿ ಮಹಿಳೆ, ಪ್ರಿಯಕರನೊಂದಿಗೆ ಸೇರಿ ತನ್ನ 10 ವರ್ಷದ ಮಗ ಮತ್ತು 6 ವರ್ಷದ ಮಗಳನ್ನು ಹತ್ಯೆಗೈದಿದ್ದಾರೆ. ಬಳಿಕ ಮೃತ ದೇಹಗಳನ್ನು ಕಾಲುವೆಗೆ ಎಸೆದಿದ್ದಾರೆ. ಮೊದಲಿಗೆ 6 ವರ್ಷದ ಮಗಳನ್ನು ಮನೆಯಲ್ಲಿ ಹತ್ಯೆ ಮಾಡಿ, ಬಳಿಕ 10 ವರ್ಷದ ಮಗನನ್ನು ನೆರೆಯ ಮನೆಯಲ್ಲಿ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಮಹಿಳೆಯ ಪ್ರಿಯಕರ ಸೌದ್ ಎಂಬುವರು ಸ್ಥಳೀಯ ನಗರಸಭೆ ಸದಸ್ಯನಾಗಿದ್ದಾರೆ. ಇನ್ನು ಇಬ್ಬರ ಮಕ್ಕಳ ಹತ್ಯೆ ಪ್ರಕರಣದಲ್ಲಿ ನೆರೆಯವರು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆ ಮೂವರು ಮಹಿಳೆಯರು ಮತ್ತು ಮೂವರು ಪುರುಷರನ್ನು ಬಂಧಿಸಿಲಾಗಿದೆ. ಮೃತ ಮಕ್ಕಳ ದೇಹಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ.
ಹೆಂಡತಿಕೊಂದು ದೇಹ ತುಂಡರಿಸಿದ ಪತಿ:ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಪ್ರಕರಣವೊಂದರಲ್ಲಿ, ಪತಿಯೇ ತನ್ನ ಪತ್ನಿಯನ್ನು ಹತ್ಯೆಗೈದಿರುವ ಘಟನೆ 2 ದಿನಗಳ ಹಿಂದೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಮೂರು ಭಾಗಗಳಾಗಿ ಬೇರ್ಪಡಿಸಿ ಹೂತು ಹಾಕಿದ್ದಾರೆ. ಮುಮ್ತಾಜ್ ಶೇಖ್ (35) ಮೃತ ಮಹಿಳೆ. ಆರೋಪಿ ಪತಿ ಅಲೀಂ ಶೇಖ್ನನ್ನು ಬಂಧಿತ ಆರೋಪಿ.