ಕರ್ನಾಟಕ

karnataka

ETV Bharat / bharat

ಮೊಬೈಲ್​​ ಕೊಡಲು ನಿರಾಕರಿಸಿದ ತಂದೆಯನ್ನೇ ಕೊಂದ ಮಗಳು!

ಫೋನ್​ ಮುಚ್ಚಿಟ್ಟಿದ್ದಕ್ಕಾಗಿ ಆಕ್ರೋಶಗೊಂಡ ಆಕೆ ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದ್ದು, ಇದೀಗ ಆರೋಪಿಗಳನ್ನು ಬಂಧನ ಮಾಡಲಾಗಿದೆ.

Woman kills father
Woman kills father

By

Published : Jan 26, 2021, 9:19 PM IST

ಬಿಲಾಸ್ಪುರ್(ಛತ್ತೀಸಘಡ)​:ಕೇಳಿದ ತಕ್ಷಣ ತಂದೆ ಫೋನ್ ನೀಡಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಮಗಳು ಹೆತ್ತ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಛತ್ತೀಸಘಡದ ಬಿಲಾಸ್ಪುರ್​ದಲ್ಲಿ ನಡೆದಿದೆ.

58 ವರ್ಷದ ತಂದೆ ಸಾವನ್ನಪ್ಪಿದ್ದು, ಕೊಲೆ ಮಾಡಿರುವ 28 ವರ್ಷದ ದಿವ್ಯಾ ಸರಸ್ವತಿ ಬಂಧನವಾಗಿದ್ದಾಳೆ. ಇನ್ನು ತಾಯಿಯ ಸಹಾಯದಿಂದ ಮೃತ ತಂದೆಯ ಶವ ಮನೆಯ ಅಂಗಳದಲ್ಲಿ ಮುಚ್ಚಿ ಹಾಕಿದ್ದಾರೆ. ಜನವರಿ 24ರಂದು ಈ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ-ಮಗಳ ಬಂಧನ ಮಾಡಿರುವ ಪೊಲೀಸರು, ಮೊಬೈಲ್​ ವಶಕ್ಕೆ ಪಡೆದುಕೊಂಡಿದ್ದಾರೆ. ಜನವರಿ 23ರಂದು ಸರಸ್ವತಿ ಪತಿ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಹೋಗಿದ್ದಾನೆ. ಮರುದಿನ ಆಕೆಯ ಮೊಬೈಲ್ ಕಳೆದುಹೋಗಿದ್ದು, ಈ ಬಗ್ಗೆ ತಂದೆ ಬಳಿ ಕೇಳಿದ್ದಾಳೆ. ನನಗೆ ಗೊತ್ತಿಲ್ಲ ಎಂದು ತಂದೆ ಹೇಳಿದ್ದಾನೆ.

ಇದರ ಬೆನ್ನಲ್ಲೇ ನೀ ನನ್ನ ಮಾತಿಗೆ ವಿರೋಧವಾಗಿ ಮದುವೆಯಾಗಿದ್ದು, ಮೊಬೈಲ್ ಮುಚ್ಚಿಟ್ಟಿದ್ದೇನೆ ಎಂದು ತಿಳಿಸಿ ವಾಪಸ್ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಮಗಳು ತಂದೆ ಮೇಲೆ ಕಟ್ಟಿಗೆ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾಳೆ. ತೀವ್ರ ರಕ್ತಸ್ರಾವ ಆಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಮೃತದೇಹವನ್ನ ತಾಯಿ ಸಹಾಯದಿಂದ ಹೊತ್ತು ಹಾಕಿದ್ದಾರೆ. ಇದೀಗ ಸೆಕ್ಷನ್​ 302, 323, 201 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ABOUT THE AUTHOR

...view details