ಕೋಟಾ (ರಾಜಸ್ಥಾನ): ಬೆಳ್ಳಿಯ ಕಾಲ್ಗೆಜ್ಜೆಗಾಗಿ ನಾಲ್ಕು ವರ್ಷದ ಬಾಲಕಿಯನ್ನು ಮಹಿಳೆಯೊಬ್ಬಳು ಕತ್ತು ಹಿಸುಕಿ ಹತ್ಯೆಗೈದು ಮೃತದೇಹವನ್ನು ಆಕೆಯ ಮನೆಯೆದುರಿನ ಮರಳಿನ ದಿಬ್ಬದಲ್ಲಿ ಹೂತು ಹಾಕಿರುವ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ತರುಣಾ(29) ಎಂಬಾಕೆ ಶನಿವಾರ ಸಂಜೆ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದಿದ್ದಾಳೆ. ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು, ನಂತರ ಕತ್ತು ಹಿಸುಕಿ ಕೊಲೆ ಮಾಡಿ ಕಾಲ್ಗೆಜ್ಜೆಗಳನ್ನು ತೆಗೆದುಕೊಂಡಿದ್ದಳು ಪೊಲೀಸರು ತಿಳಿಸಿದ್ದಾರೆ.
ಬೆಳ್ಳಿ ಕಾಲ್ಗೆಜ್ಜೆಗೆ ಬಾಲಕಿ ಕೊಂದು ಶವ ಮರಳಲ್ಲಿ ಹೂತಿಟ್ಟ ಮಹಿಳೆ - ಬೆಳ್ಳಿಯ ಕಾಲ್ಗೆಜ್ಜೆಗಾಗಿ ಬಾಲಕಿಯನ್ನು ಕೊಂದ ಮಹಿಳೆ
ಬೆಳ್ಳಿಯ ಕಾಲ್ಗೆಜ್ಜೆಗಾಗಿ ನಾಲ್ಕು ವರ್ಷದ ಬಾಲಕಿಯನ್ನು ಮಹಿಳೆಯೊಬ್ಬಳು ಕತ್ತು ಹಿಸುಕಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣವನ್ನು ಪತ್ತೆ ಹಚ್ಚಿ ಬಾಲಕಿಯ ಶವವನ್ನು ಮರಳಿನ ದಿಬ್ಬದಿಂದ ಹೊರತೆಗೆದಿದ್ದಾರೆ. ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಮೃತ ಬಾಲಕಿ ಮಧ್ಯಪ್ರದೇಶದ ಸುವಾಸ್ರಾ ನಿವಾಸಿ. ಕಳೆದ ನಾಲ್ಕು ತಿಂಗಳಿನಿಂದ ರಾಜಸ್ಥಾನದ ಜಲಾವರ್ ಜಿಲ್ಲೆಯ ಮೆಹರ್‌ಪುರ ಗ್ರಾಮದ ತನ್ನ ಅಜ್ಜಿಯ ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಶರತ್ ಆತ್ಮಹತ್ಯೆ ಪ್ರಕರಣ: ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಅಧ್ಯಕ್ಷನ ವಿರುದ್ಧ ಎಫ್ಐಆರ್