ಪೂರ್ವ ಚಂಪಾರಣ್:ಬೇಸಿಗೆ ವೇಳೆ ನಿಂಬೆಗೆ ಎಲ್ಲಿಲ್ಲದ ಬೇಡಿಕೆ ಇರುತ್ತೆ. ಈಗ ಬೇಸಿಗೆಕಾಲ ಇರುವುದರಿಂದ ಮಾರುಕಟ್ಟೆಯಲ್ಲಿ ನಿಂಬೆ ಬೆಲೆ ಅಧಿಕವಾಗಿದೆ. ಬೆಲೆ ಏರಿಕೆ ಮತ್ತು ಸರಕು - ಸಾಗಣೆ ಕಡಿಮೆಯಾಗಿರುವುದರಿಂದ ಮನೆಯಲ್ಲಿ ಇದ್ದ ನಿಂಬೆಯನ್ನೇ ಸದುಪಯೋಗ ತಕ್ಕಂತೆ ಬಳಸಬೇಕಾಗುತ್ತದೆ. ಇದೇ ನಿಂಬೆ ವಿಚಾರವಾಗಿ ಅತ್ತೆ- ಸೊಸೆ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಘಟನೆ ಛೌಡಾದನೋ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್‌ಪುರ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ: ಚೈನ್‌ಪುರ ಗ್ರಾಮದ ನಿವಾಸಿ ಸುನಿಲ್ ಬೈತಾ ಕುಟುಂಬ ವಾಸಿಸುತ್ತಿದೆ. ಸುನಿಲ್ ಬೈತಾ ಮತ್ತು ಆತನ ತಂದೆ ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಸುನಿಲ್ ಬೈತಾ ಪತ್ನಿ ಕಾಜಲ್ ದೇವಿ (28), ಆತನ ತಾಯಿ ಮತ್ತು ಅಕ್ಕ - ತಂಗಿಯರು ವಾಸಿಸುತ್ತಿದ್ದಾರೆ.
ನಿಂಬೆಗಾಗಿ ಕೊಲೆ: ಆದರೆ, ಮನೆಯಲ್ಲಿ ನಿಂಬೆಹಣ್ಣಿನ ವಿಚಾರಕ್ಕಾಗಿ ಅತ್ತೆ- ಸೊಸೆ ಮಧ್ಯೆ ಜಗಳವಾಗಿದೆ. ಈ ಜಗಳಕ್ಕೆ ಅತ್ತೆ ಜೊತೆ ನಾದಿನಿಯರಿಬ್ಬರು ಸೇರಿದ್ದಾರೆ. ಇವರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಅತ್ತೆ- ನಾದಿನಿಯರು ಸೇರಿ ಸೊಸೆಯನ್ನು ತೀವ್ರವಾಗಿ ಥಳಿಸಿ, ನಂತರ ಹಗ್ಗದಿಂದ ಕಾಜಲ್ನ ಕತ್ತಿಗೆ ಗಟ್ಟಿಯಾಗಿ ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಓದಿ:ವಿಡಿಯೋ: ನಿಂಬೆಗೂ ಬಂತು ಬಂಗಾರದ ಬೆಲೆ; 50 ಕೆಜಿ ಕದ್ದು ಪರಾರಿಯಾದ ಕಳ್ಳ