ಹೈದರಾಬಾದ್ :ನಿರ್ಮಾಪಕ ಕಚೇರಿ ಎದುರುಯುವತಿಯೊಬ್ಬಳು ನಗ್ನ ಹೋರಾಟ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಪೊಲೀಸರ ಎದುರೇ ಆ ಯುವತಿ ಹೈಡ್ರಾಮಾ ಮಾಡಿರುವುದು ಬೆಳಕಿಗೆ ಬಂದಿದೆ.
ಜುಬ್ಲಿ ಹಿಲ್ಸ್ನಲ್ಲಿರುವ ನಿರ್ಮಾಪಕ ಕಚೇರಿ ಎದುರು ಸೋಮವಾರ ಬೆಳಗ್ಗೆ ಯುವತಿಯೊಬ್ಬಳು ನಗ್ನ ಹೋರಾಟ ನಡೆಸಿದ್ದಳು. ಈ ಸುದ್ದಿ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ತಲುಪಿತ್ತು. ಕೂಡಲೇ ಪೊಲೀಸರು ಆಕೆಗೆ ಬಟ್ಟೆ ತೊಡಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಓದಿ:'ನಿಧಿ'ಗಾಗಿ ಮುಗ್ಧ ಕೂಲಿ ಕಾರ್ಮಿಕ ಮಹಿಳೆಗೆ ಅವಮಾನ: ರಾಮನಗರದಲ್ಲಿ ಪೊಲೀಸರ ಮುಂದೆ 'ಬೆತ್ತಲಾದ' ಪೂಜಾರಿ!
ಪೊಲೀಸರ ವರದಿ ಪ್ರಕಾರ, ಸೋಮವಾರ ಬೆಳಗ್ಗೆ ನಿರ್ಮಾಪಕ ಕಚೇರಿ ಎದುರು ಜೂನಿಯರ್ ಆರ್ಟಿಸ್ಟ್ವೊಬ್ಬರು ತನ್ನ ಬಟ್ಟೆಯನ್ನೆಲ್ಲಾ ಕಳಚಿ ಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ನಾವು ಸ್ಥಳಕ್ಕೆ ದೌಡಾಯಿಸಿ ಆಕೆಗೆ ಬಟ್ಟೆ ತೊಡಗಿಸಿ ಠಾಣೆಗೆ ಕರೆತರಲಾಯಿತು ಎಂದು ಪೊಲೀಸರು ಹೇಳಿದರು.
ಆಕೆಯ ವಿರುದ್ಧ ಮಾನಸಿಕ ಆರೋಗ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆಕೆ ಇದೇ ಮೊದಲ ಬಾರಿ ಈ ರೀತಿ ಮಾಡುತ್ತಿಲ್ಲ. ಈ ಹಿಂದೆಯೂ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾಳೆ ಎಂದು ಜುಬ್ಲಿ ಹಿಲ್ಸ್ ಮಹಿಳಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.