ನವದೆಹಲಿ:ಮಹಿಳೆಯೊಬ್ಬಳು ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಮಹಿಳೆ ರೈಲಿನ ಮುಂದೆ ಜಿಗಿಯುವುದನ್ನು ಕಂಡ ರೈಲಿನ ಚಾಲಕ ತಕ್ಷಣ ತುರ್ತು ಬ್ರೇಕ್ ಹಾಕಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಬಚಾವಾಗಿದ್ದಾಳೆ. ಅಲ್ಲದೆ ತಕ್ಷಣ ಕಾರ್ಯಪ್ರವೃತ್ತರಾದ ಸಿಐಎಸ್‌ಎಫ್ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿ, ಟ್ರ್ಯಾಕ್‌ನಿಂದ ಮೇಲೆತ್ತಿದ್ದಾರೆ.