ಕರ್ನಾಟಕ

karnataka

ETV Bharat / bharat

ಗಂಡನಿಗೆ ಕರೆ ಮಾಡಿ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ - ನದಿಗೆ ಹಾರುವ ಮುನ್ನ ಗಂಡನಿಗೆ ಕರೆ ಮಾಡಿದ ಪತ್ನಿ

ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗಂಡನಿಗೆ ಕರೆ ಮಾಡಿ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಘಟನೆ ಜರುಗಿದೆ.

woman-jumps-into-river-with-three-children-in-begusarai
ಗಂಡನಿಗೆ ಕರೆ ಮಾಡಿ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಮಹಿಳೆ

By

Published : Apr 9, 2023, 7:42 PM IST

ಬೇಗುಸರಾಯ್ (ಬಿಹಾರ):ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿರುವ ಘಟನೆ ಇಂದು ಸಂಜೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ. ನದಿಗೆ ಹಾರುವ ಮುನ್ನ ಮಹಿಳೆ ತನ್ನ ಗಂಡನಿಗೆ ಮೊಬೈಲ್​ನಿಂದ ಕರೆ ಮಾಡಿದ್ದು, ಇದರಿಂದ ನದಿಯಲ್ಲಿ ವ್ಯಾಪಕವಾದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಇದನ್ನೂ ಓದಿ:ಇಬ್ಬರು ಮಕ್ಕಳನ್ನು ದೇಹಕ್ಕೆ ಕಟ್ಟಿಕೊಂಡು ನದಿಗೆ ಹಾರಿದ ಅಮ್ಮ

ಇಲ್ಲಿನ ದಂಡಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹನಪುರದ ನಿವಾಸಿ ರವಿಕುಮಾರ್ ಸಿಂಗ್ ಮತ್ತು ಪತ್ನಿ ಪೂಜಾ ಕುಮಾರಿ ನಡುವೆ ಮಗುವಿನ ವಿಚಾರವಾಗಿ ಗಲಾಟೆ ಉಂಟಾಗಿತ್ತು. ಇದೇ ವಿಷಯವಾಗಿ ಕೋಪಗೊಂಡು 30 ವರ್ಷದ ತಾಯಿ ಪೂಜಾ ತನ್ನ 10 ವರ್ಷದ ಮಗಳು ಮತ್ತು 8 ಮತ್ತು 6 ವರ್ಷದ ಮಗನೊಂದಿಗೆ ಸಮೀಪದ ಸೇತುವೆಯಿಂದ ಗಂಡಕ್ ನದಿಗೆ ಜಿಗಿದಿರುವ ಶಂಕೆ ವ್ಯಕ್ತವಾಗಿದೆ.

ನಡೆದಿದ್ದೇನು?:ದಂಡಾರಿ ಗ್ರಾಮದಲ್ಲಿ ಪೂಜಾ ತನ್ನ ಮಕ್ಕಳು ಮತ್ತು ವಯಸ್ಸಾದ ಅತ್ತೆ ಮತ್ತು ಮಾವನೊಂದಿಗೆ ವಾಸಿಸುತ್ತಿದ್ದಳು. ಪತಿ ರವಿಕುಮಾರ್​ ದರ್ಭಾಂಗಾದಲ್ಲಿ ನೆಲೆಸಿದ್ದು, ಅಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಆರು ವರ್ಷದ ಮಗನಿಗೆ ಯಾವುದೇ ಕಾರಣದಿಂದ ಒಂದು ಕೈ ಮುರಿದಿತ್ತು. ನಂತರ ಪತ್ನಿ ಪೂಜಾ ಚಿಕಿತ್ಸೆ ಕೊಡಿಸುತ್ತಿದ್ದಳು. ಅಷ್ಟರಲ್ಲಿ ಮಗುವಿನ ಇನ್ನೊಂದು ಕೈ ಕೂಡ ಮುರಿದಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮೈಸೂರು: ವಿವಾಹಿತನೊಂದಿಗೆ ಕಪಿಲಾ ನದಿಗೆ ಹಾರಿ ಯುವತಿ ಆತ್ಮಹತ್ಯೆ

ಇದೇ ವಿಷಯವಾಗಿ ಪತಿ-ಪತ್ನಿ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು. ಜೊತೆಗೆ ಪತಿ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪೂಜಾ ಕೋಪಗೊಂಡಿದ್ದಳು. ಇದರ ನಡುವೆ ಇಂದು ಪೂಜಾ ತನ್ನ ಮಕ್ಕಳೊಂದಿಗೆ 3 ಗಂಟೆ ಸುಮಾರಿಗೆ ಗಂಡಕ್ ನದಿಯ ಸೇತುವೆಯ ಬಳಿಗೆ ಬಂದಿದ್ದಳು. ಅಲ್ಲಿಂದಲೇ ಪತಿಗೆ ಕರೆ ಮಾಡಿ ನಿಮ್ಮ ಮೊಬೈಲ್​ಅನ್ನು ಸೇತುವೆಯ ಮೇಲಿಟ್ಟಿದ್ದೇನೆ. ನಾವೆಲ್ಲರೂ ನದಿಯಲ್ಲಿ ಬಿದ್ದು ಸಾಯುತ್ತೇವೆ ಎಂದು ಪತಿ ರವಿಕುಮಾರ್​ಗೆ ಕರೆ ಮಾಡಿ ಹೇಳಿದ್ದಳು. ಇದಾದ ನಂತರ ಫೋನ್ ಸಂಪರ್ಕ ಕಡಿತಗೊಂಡಿದೆ. ಇಂದರಿಂದ ಗಾಬರಿಗೊಂಡ ಪತಿ ದರ್ಭಾಂಗಾದಿಂದ ದಂಡಾರಿಗೆ ದೌಡಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಿಥಿಲೇಶ್ ಕುಮಾರ್​ ತಿಳಿಸಿದ್ದಾರೆ.

ನದಿಯಲ್ಲಿ ನಿರಂತರ ಶೋಧ ಕಾರ್ಯ:ಪತ್ನಿಗೆ ಕರೆ ಮಾಡಿ ನದಿಗೆ ಹಾರುವುದಾಗಿ ಪೂಜಾ ಹೇಳಿದ್ದರಿಂದ ಸದ್ಯ ಸೇತುವೆ ಸಮೀಪದಲ್ಲೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ದೋಣಿಗಳ ಸಹಾಯದಿಂದ ಹುಡುಕಾಟ ನಡೆಸಲಾಗಿದೆ. ಆದರೆ, ಇದುವರೆಗೆ ಯಾರೊಬ್ಬರ ಶವವೂ ಪತ್ತೆಯಾಗಿಲ್ಲ. ನಿರಂತರವಾಗಿ ಶೋಧ ಕಾರ್ಯ ಮುಂದುವರೆಸಲಾಗುವುದು ಎಂದು ಮಿಥಿಲೇಶ್ ಕುಮಾರ್​ ಹೇಳಿದ್ದಾರೆ. ಅಲ್ಲದೇ, ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ:ಡ್ಯಾಂನಿಂದ ನೀರು ಬಿಡುಗಡೆ: ನದಿ ಬಂಡೆಗಳ ಮೇಲೆ ಸಿಲುಕಿದ್ದ 12 ಭಕ್ತರ ರಕ್ಷಣೆ

ABOUT THE AUTHOR

...view details