ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಅವನೀಶ್ ಶರಣ್ ಅವರು ಆಗಾಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಆಸಕ್ತಿ ಮೂಡಿಸುವಂತಹ ಆಕರ್ಷಕ, ಉಪಯುಕ್ತ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅಂತಹುದೇ ಒಂದು ವಿಡಿಯೋ ಶೇರ್ ಮಾಡಿದ್ದಾರೆ. 22 ವರ್ಷದ ಯುವತಿಯೊಬ್ಬಳು ರಸ್ತೆ ಅಪಘಾತಗಳನ್ನು ತಡೆಯಲು ಬೈಸಿಕಲ್‌ಗಳಿಗೆ ಸುರಕ್ಷತಾ ದೀಪಗಳನ್ನು (Safety lights) ಅಳವಡಿಸುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಲಕ್ನೋದ ಖುಷಿ ಪಾಂಡೆ ರಸ್ತೆ ಅಪಘಾತದಲ್ಲಿ ತನ್ನ ತಾಯಿ ಮತ್ತು ಅಜ್ಜನನ್ನು ಕಳೆದುಕೊಂಡ ಬಳಿಕ ಹೀಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತಳಾಗಿದ್ದಾರೆ. ಖುಷಿಯ ಅಜ್ಜ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಮುಂಭಾಗದಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದರಂತೆ. ಅಂದಿನಿಂದ, ಪಾಂಡೆ ಸೈಕಲ್‌ಗಳಿಗೆ ಸುಮಾರು 1500 ಕ್ಕೂ ಅಧಿಕ ಉಚಿತ ಕೆಂಪು ದೀಪಗಳನ್ನು ಅಳವಡಿಸಿದ್ದಾರೆ.
ಇದನ್ನೂ ಓದಿ :ಮದುವೆ ಸಮಾರಂಭದಲ್ಲಿ ಮಾಫಿಯಾ ಅತೀಕ್ ಅಹ್ಮದ್ ಪುತ್ರ ಗುಂಡು ಹಾರಿಸುವ ಹಳೇ ವಿಡಿಯೋ ವೈರಲ್
ವಿಡಿಯೋದಲ್ಲಿ ಏನಿದೆ?: ಅವನೀಶ್ ಶರಣ್ ಅವರು "ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂಬ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ನಗರದ ಪ್ರಮುಖ ರಸ್ತೆಯಲ್ಲಿ "ಸೈಕಲ್ ಪೆ ಲೈಟ್ ಲಗ್ವಾವೋ" ಎಂದು ಬರೆದಿರುವ ಫಲಕ ಹಿಡಿದುಕೊಂಡು ನಿಂತಿದ್ದಾರೆ. ಸೈಕಲ್ಗಳನ್ನು ತಡೆದು ಸುರಕ್ಷತಾ ದೀಪಗಳನ್ನು ಅಳವಡಿಸುವುದನ್ನೂ ನೀವು ನೋಡಬಹುದು.
ಐಎಎಸ್ ಅಧಿಕಾರಿ ಹಂಚಿಕೊಂಡ ವಿಡಿಯೋ ನೆಟಿಜನ್ ಮನ ಗೆಲ್ಲುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಂಡೆಯವರ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದ್ದಾರೆ. "ಉದಾತ್ತ ಕೆಲಸ. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ" ಎಂದು ಒಬ್ಬ ಬಳಕೆದಾರರು ಬರೆದರೆ, ಮತ್ತೊಬ್ಬರು 'ಉತ್ತಮ ಪ್ರಯತ್ನ' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.