ಕರ್ನಾಟಕ

karnataka

ETV Bharat / bharat

ಒಳಗೆ ಸೇರಿದರೆ ಗುಂಡು.. ಹುಡುಗಿಯ ರಂಪಾಟ ಕಂಡು ಪೊಲೀಸರೇ ಬೆಚ್ಚಿಬಿದ್ದರು-Video - ಕುಡಿದು ಪೊಲೀಸರೊಂದಿಗೆ ಯುವತಿ ರಂಪಾಟ

ಕಂಠಪೂರ್ತಿ ಮದ್ಯಪಾನ ಮಾಡಿದ್ದ ಯುವತಿಯೋರ್ವಳು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Woman behaved rudely with police
Woman behaved rudely with police

By

Published : Jan 1, 2022, 7:32 PM IST

ಹೈದರಾಬಾದ್​(ತೆಲಂಗಾಣ): ಹೊಸ ವರ್ಷ ಬರಮಾಡಿಕೊಳ್ಳುವ ತವಕದಲ್ಲಿ ಕಂಠಪೂರ್ತಿ ಮದ್ಯ ಸೇವನೆ ಮಾಡಿರುವ ಯುವತಿಯೋರ್ವಳು ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ. ಪ್ರಕರಣದ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಕುಡಿದ ಮತ್ತಿನಲ್ಲಿ ಯುವತಿ ರಂಪಾಟ ನೋಡಿ...

ಹೈದರಾಬಾದ್​​ನ ಜುಬಿಲಿ ಹಿಲ್ಸ್ ಚೆಕ್ ಪೋಸ್ಟ್​ ಬಳಿ ಡಿ.31ರ ತಡರಾತ್ರಿ ಈ ಘಟನೆ ನಡೆದಿದೆ. ಹೊಸ ವರ್ಷ ಆಚರಣೆ ಸಂಭ್ರಮದಲ್ಲಿದ್ದ ಯುವತಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದು, ಪೊಲೀಸರು ಡ್ರಂಕ್​ ಆ್ಯಂಡ್​ ಡ್ರೈವ್​​ ತಪಾಸಣೆ ನಡೆಸಲು ಮುಂದಾದಾಗ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಳೆ.

ಇದನ್ನೂ ಓದಿರಿ:ಸೇನಾ ಹೆಲಿಕಾಪ್ಟರ್ ಪತನ ಪ್ರಕರಣ: ಮುಂದಿನ ವಾರ ತನಿಖಾ ವರದಿ ಸಲ್ಲಿಕೆ ಸಾಧ್ಯತೆ

ಬಂಜಾರ್​ ಹಿಲ್ಸ್​​​ ಪೊಲೀಸರು ತಡರಾತ್ರಿ ಡ್ರಂಕ್​ ಆ್ಯಂಡ್​ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಯುವತಿ ಕೂಡ ಕಾರಿನಲ್ಲಿ ಬಂದಿದ್ದಾಳೆ. ಪರೀಕ್ಷೆಗೊಳಪಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಇದಕ್ಕೆ ಹಿಂದೇಟು ಹಾಕಿರುವ ಆಕೆ ಅಸಭ್ಯವಾಗಿ ವರ್ತಿಸಿ, ಖಾಕಿ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ. ಇತರೆ ಸ್ನೇಹಿತರು ಯುವತಿಗೆ ಬೆಂಬಲ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್​​ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details