ಜಮುಯಿ (ಬಿಹಾರ):ಜಮುಯಿ ಜಿಲ್ಲೆಯಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಈಗ ಎಲ್ಲೆಡೆ ಇದರ ಬಗ್ಗೆ ಚರ್ಚೆ ಜೋರಾಗಿದೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಲಾಕಪ್ನಿಂದ ಬಿಡಿಸಿಕೊಳ್ಳಳು ದುರ್ಗಾಮಾತೆಯಾದ ಕತೆ ಇದು. ಒಂದು ಕೈಯಲ್ಲಿ ಅಕ್ಕಿ ಇನ್ನೊಂದರಲ್ಲಿ ಕೋಲು ಹಿಡಿದು ಸಾಕ್ಷಾತ್ ದೇವಿ ನಾನೇ ಎಂದು ಹೇಳುತ್ತಿದ್ದರು ಈ ಮಹಿಳೆ.
ಕುಡುಕ ಗಂಡನನ್ನು ಬಿಡಿಸಿಕೊಳ್ಳಲು ಬಂದ ಮಹಿಳೆ: ಈ ಘಟನೆಯಲ್ಲಿನ ಮಹಿಳೆಯ ಹೆಸರು ಸಂಜೂ ದೇವಿ. ಇವರ ಕುಡುಕ ಪತಿ ಕಾರ್ತಿಕ್ ಮಾಂಝಿ ಬಂಧಿಸಿ ಸಿಕಂದರಾ ಠಾಣೆಯ ಲಾಕಪ್ನಲ್ಲಿರಿಸಲಾಗಿತ್ತು. ಪೊಲೀಸ್ ಠಾಣೆಗೆ ಬಂದ ಮಹಿಳೆ, ನಾನೋರ್ವ ದೇವಿ ಭಕ್ತೆ.. ನನ್ನ ಮೇಲೆ ದೇವಿ ಆವಾಹನೆಯಾಗಿದ್ದಾಳೆ ಎನ್ನತೊಡಗಿದರು. ನನ್ನ ಪತಿಯನ್ನು ಬಿಡಿಕೊಂಡು ಹೋಗಲು ಬಂದಿರುವೆ ಎಂದು ಹೇಳತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಹೈ ವೋಲ್ಟೇಜ್ ಡ್ರಾಮಾನೇ ನಡೆಯಿತು.
ಪೊಲೀಸ್ ಠಾಣೆಯಲ್ಲಿ ಡ್ರಾಮಾ: ಮಹಿಳೆಯು ಪೊಲೀಸರ ಎದುರು ಮಾಟ ಮಂತ್ರ, ಜಾದೂ ಟೋನಾ ಮುಂತಾದುವನ್ನು ಮಾಡತೊಡಗಿದರು. ಗಂಟೆಗಳವರೆಗೆ ಮಹಿಳೆಯ ಈ ಡ್ರಾಮಾ ನಡೆಯುತ್ತಲೇ ಇತ್ತು.