ತಿರುವನಂತಪುರಂ(ಕೇರಳ):ಐವತ್ತು ವರ್ಷದ ಮಹಿಳೆಯನ್ನು ಆಕೆಯ 46 ವರ್ಷದ ಪ್ರಿಯಕರ ನಡುರಸ್ತೆಯಲ್ಲೇ ಕೊಲೆ ಮಾಡಿರುವ ಘಟನೆ ಕೇರಳದ ತಿರುವನಂತಪುರಂನ ವಜೈಲಾದಲ್ಲಿ ನಡೆದಿದೆ. ಆರೋಪಿ ರಾಜೇಶ್ ಕಿಲಿಮನೂರಿನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ. ಆತ ನಂದಿಯೋಡು ನಿವಾಸಿ ಸಿಂಧು ಜೊತೆ 12 ವರ್ಷಗಳಿಂದ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಕಳೆದ ಒಂದು ತಿಂಗಳಿನಿಂದ ಇಬ್ಬರು ಬೇರೆಯಾಗಿದ್ದರು. ಸಿಂಧು ಆತನಿಂದ ದೂರ ಹೋಗಲು ನಿರ್ಧರಿಸಿದ ನಂತರ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಮತ್ತೆ ಬರಲು ಒಪ್ಪಲಿಲ್ಲ. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಪೆರೂರ್ಕಡ ಠಾಣಾಧಿಕಾರಿ ಸಾಯಿಜುನಾಥ ವಿ. ರಾಜೇಶ್ ತಿಳಿಸಿದ್ದಾರೆ.