ಕರ್ನಾಟಕ

karnataka

ETV Bharat / bharat

ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ ಮಹಿಳೆ: ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೂ ಕಚ್ಚಿತು - ಮಹಿಳೆಗೆ ಕಚ್ಚಿದ ಬೀದಿ ನಾಯಿ

ಕೇರಳದ ತಿರುವನಂತಪುರಂನ ಸಮುದಾಯ ಆರೋಗ್ಯ ಕೇಂದ್ರದ ಕೊಠಡಿಯೊಳಗೆ ಮಲಗಿದ್ದ ನಾಯಿಯ ಬಾಲದ ಮೇಲೆ ಮಹಿಳೆ ಕಾಲಿಟ್ಟಿದ್ದು, ಇದರಿಂದ ನಾಯಿ ಕಾಲಿಗೆ ಕಚ್ಚಿದೆ.

woman-goes-to-clinic-to-treat-a-cat-byte-bitten-by-dog-inside-the-clinic
ಬೆಕ್ಕು ಕಚ್ಚಿದೆ ಎಂದು ಚಿಕಿತ್ಸೆಗೆ ಹೋದ ಮಹಿಳೆ: ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೂ ಕಚ್ಚಿತು

By

Published : Sep 30, 2022, 6:15 PM IST

ತಿರುವನಂತಪುರಂ (ಕೇರಳ): ಬೆಕ್ಕು ಕಚ್ಚಿದ್ದರಿಂದ ಆ್ಯಂಟಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದ ಮಹಿಳೆಯೊಬ್ಬರಿಗೆ ಆರೋಗ್ಯ ಕೇಂದ್ರದಲ್ಲೇ ಬೀದಿ ನಾಯಿಯೊಂದು ಕಚ್ಚಿದೆ. ಕೇರಳದ ತಿರುವನಂತಪುರಂನಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ವಿಜಿಂಜಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಬೆಳಗ್ಗೆ ಅಪರ್ಣಾ ಎಂಬುವವರು ಬೆಕ್ಕು ಕಚ್ಚಿದ್ದರಿಂದ ಲಸಿಕೆ ತೆಗೆದುಕೊಳ್ಳಲು ಹೋಗಿದ್ದರು. ಆರೋಗ್ಯ ಕೇಂದ್ರದಲ್ಲಿ ಸಮಾಲೋಚನೆಯ ಸಮಯದಲ್ಲಿ ಆಕಸ್ಮಿಕವಾಗಿ ಆಸ್ಪತ್ರೆಯ ಕೊಠಡಿಯೊಳಗೆ ಮಲಗಿದ್ದ ನಾಯಿಯ ಬಾಲದ ಮೇಲೆ ಅಪರ್ಣಾ ಕಾಲಿಟ್ಟಿದ್ದಾರೆ. ಇದರಿಂದ ನಾಯಿ ಅಪರ್ಣಾ ಕಾಲಿಗೆ ಕಚ್ಚಿದೆ.

ನಾಯಿ ಕಡಿತದಿಂದ ಅಪರ್ಣಾ ಕಾಲಿಗೆ ಆಳವಾದ ಗಾಯಗಳಾಗಿವೆ. ಇದೇ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಪರ್ಣಾ ಮೇಲೆ ದಾಳಿ ಮಾಡಿದ ನಾಯಿ ಆಸ್ಪತ್ರೆಯ ಕಾಂಪೌಂಡ್‌ನಲ್ಲಿ ವರ್ಷಗಳಿಂದಲೂ ವಾಸವಾಗಿತ್ತು. ಈ ನಾಯಿಗೆ ರೇಬಿಸ್ ಲಸಿಕೆ ನೀಡಿರಲಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ:ಹಾಡಹಗಲೇ ಕೈಯಲ್ಲಿ ಡ್ರಗ್ಸ್​​ ಇಂಜೆಕ್ಷನ್ ಹಿಡಿದು ಓಡಾಡಿದ ಯುವಕ: ವಿಡಿಯೋ ವೈರಲ್​

ABOUT THE AUTHOR

...view details