ಕಮ್ರೂಪ್(ಅಸ್ಸೋಂ): ಮಹಿಳೆಯೊಬ್ಬರು ಒಂದೇ ಸಮಯದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಅಸ್ಸೋಂನ ಕಮ್ರೂಪ್ ಜಿಲ್ಲೆಯ ರಂಗಿಯಾದಲ್ಲಿ ನಡೆದಿದೆ.
ಭೀಕರ ಭೂಕಂಪಗಳ ನಡುವೆ ಜನರು ಭಯಭೀತರಾದ ಸಮಯದಲ್ಲಿ ಇಲ್ಲಿನ ಧುಬ್ರಿಯ ಮಹಿಳೆಯೊಬ್ಬರು ರಂಗಿಯಾದ ಸ್ವಸ್ತಿ ಆಸ್ಪತ್ರೆಯಲ್ಲಿ ಬುಧವಾರ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ಹಿರಿಯ ವೈದ್ಯ ಹಿತೇಂದ್ರ ಅವರು ಬಾಣಂತಿಯ ಚಿಕಿತ್ಸಾ ಮೇಲ್ವಿಚಾರಣೆ ನಡೆಸುತ್ತಿದ್ದರು.
ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಕಳೆದ ಬುಧವಾರ ಮಹಿಳೆ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಹಳ ಅಪರೂಪವೆಂದು ಪರಿಗಣಿಸಲಾಗಿರುವ ಈ ಘಟನೆಯು ಕುಟುಂಬ ಸದಸ್ಯರು ಮತ್ತು ಆಸ್ಪತ್ರೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ಸೇರಿದಂತೆ ಎಲ್ಲರಿಗೂ ಸಂತೋಷ ತಂದಿದೆ.
ತನ್ನ ಪತ್ನಿ ನಾಲ್ಕು ಮಕ್ಕಳಿಗೆ ಏಕ ಕಾಲಕ್ಕೆ ಜನ್ಮ ನೀಡಿದ್ದರಿಂದ ಬಹಳ ಆನಂದಗೊಂಡಿರುವ ತಂದೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸುವಂತೆ ಕೋರಿದ್ದಾರೆ.