ಕರ್ನಾಟಕ

karnataka

ETV Bharat / bharat

ರೈಲು ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ: ಹಣ್ಣಿನ ವ್ಯಾಪಾರಿ ಸಹಾಯದಿಂದ ತಾಯಿ ಮಗು ಸೇಫ್!​ - Etv Bharat Kannada

ಮಹಿಳೆಯೊಬ್ಬರು ಉತ್ತರ ಪ್ರದೇಶದ ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ.

ರೈಲು ನಿಲ್ದಾಣದಲ್ಲಿ ಮಗುವಿನ ಜನನ
ರೈಲು ನಿಲ್ದಾಣದಲ್ಲಿ ಮಗುವಿನ ಜನನ

By

Published : Apr 5, 2023, 7:10 AM IST

ಝಾನ್ಸಿ (ಉತ್ತರಪ್ರದೇಶ): ಮಹಿಳೆಯೊಬ್ಬರು ರೈಲು ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದೆ. ಇಲ್ಲಿಯ ಲಕ್ಷ್ಮೀಬಾಯಿ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಗರ್ಭಿಣಿ ಮತ್ತು ಆಕೆಯ ಪತಿ ದೆಹಲಿಯಿಂದ ದಾಮೋಹ್​ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಮಹಿಳೆಗೆ ಹೆರಿಗೆ ನೋವು ಕಾಣಿಸಕೊಂಡಿದೆ. ಇದನ್ನು ಗಮನಿಸಿದ ಹಣ್ಣಿನ ಜ್ಯೂಸ್ ವ್ಯಾಪಾರಿ ತನ್ವೀರ್ ಮಿರ್ಜಾ ಎಂಬುವವರು ಕೂಡಲೆ ಮಹಿಳೆಯ ಸಹಾಯಕ್ಕಾಗಿ ಧಾವಿಸಿ ಈ ಕುರಿತು ರೈಲ್ವೆ ಇಲಾಖೆಗೆ ಟ್ವೀಟ್​ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕೇವಲ 20 ನಿಮಿಷಗಳಲ್ಲಿ ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಚಿಕಿತ್ಸೆ ನೆರವಿನಿಂದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ತನ್ವೀರ್ ಪ್ರತಿಕ್ರಿಯಿಸಿ "ಗರ್ಭಿಣಿ ಮಹಿಳೆ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ. ಆ ಮಹಿಳೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ಬಳಿಕ ಅವರ ಬಳಿ ತೆರಳಿ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಂತರ ಟಿಕೆಟ್‌ನಲ್ಲಿ ಮುದ್ರಿಸಲಾದ PNR ಸಂಖ್ಯೆಯನ್ನು ತೆಗೆದುಕೊಂಡು ರೈಲ್ವೆ ಇಲಾಖೆಗೆ ಟ್ವೀಟ್ ಮಾಡಿದೆ. ತಕ್ಷಣವೇ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು" ಎಂದು ಹೇಳಿದರು. ಸಧ್ಯ ಮಗು ಮತ್ತು ತಾಯಿ ಆರೋಗ್ಯವಾಗಿದ್ದು, ರೈಲ್ವೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ದೆಹಲಿ ವಿಮಾನ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಕರ್ನಾಟಕದ ಮಹಿಳೆ

ವಿಮಾನ ನಿಲ್ದಾಣದಲ್ಲಿ ಮಗುವಿನ ಜನನ -ದೆಹಲಿಯಲ್ಲೇ ಕೆಲ ದಿನಗಳ ಹಿಂದೆ ಇಂತಹದ್ದೇ ಘಟನೆಯೊಂದು ನಡೆದಿತ್ತು. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಮೂಲದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಟರ್ಮಿನಲ್​ 3 ರಲ್ಲಿ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಮಗುವಿಗೆ ಜನ್ಮ ಕೊಟ್ಟಿದ್ದರು. ನಂತರ ವಿಮಾನ ನಿಲ್ದಾಣದಲ್ಲೇ ಇದ್ದ ತುರ್ತು ಚಿಕಿತ್ಸಾ ಕೇಂದ್ರಕ್ಕೆ ತಾಯಿ ಮತ್ತು ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದರು. ಈ ಬಗ್ಗೆ ವಿಮಾನ ನಿಲ್ದಾಣ ಟ್ವಿಟರ್​ ಮಾಡಿ ಶುಭಹಾರೈಸಿತ್ತು.

ಇದನ್ನೂ ಓದಿ:ಹಾರುವ ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ.. ಜೀವನ ಪರ್ಯಂತ ಉಚಿತ ಏರ್ ಟಿಕೆಟ್ ನೀಡಿದ ಸಂಸ್ಥೆ

ಹಾರುವ ವಿಮಾನದಲ್ಲಿ ಜನ್ಮ ಪಡೆದ ಮಗುವಿಗೆ ಜೀವನ ಪರ್ಯಂತ ಉಚಿತ ಏರ್​ ಟಿಕೆಟ್​ ಕೊಡುಗೆ

ದೇವನಹಳ್ಳಿ: ಮತ್ತೊಂದು ಘಟನೆಯಲ್ಲಿ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಫ್ಲೈಟ್​ ನಂಬರ್ 6E122 ವಿಮಾನದಲ್ಲಿ ಗಂಡು ಮಗುವಿನ ಜನನವಾಗಿತ್ತು. ತಾಯಿ ಮತ್ತು ಮಗು ಆರೋಗ್ಯವಾಗಿದ್ದರು. ಇಂಡಿಗೋ ಸಂಸ್ಥೆಯ ಸಿಬ್ಬಂದಿ ಶ್ರಮದಿಂದ ತಾಯಿ ಮತ್ತು ಮಗುವಿಗೆ ಯಾವುದೇ ತೊಂದರೆಯಾಗದೇ ವಿಮಾನದಲ್ಲಿ ಸುಸೂತ್ರವಾಗಿ ಹೆರಿಗೆಯಾಗಿತ್ತು. ಏರ್​ಪೋರ್ಟ್​ನಲ್ಲಿ ತಾಯಿ ಮತ್ತು ಮಗುವಿಗೆ ಇಂಡಿಗೋ ಸಂಸ್ಥೆ ಸಿಬ್ಬಂದಿ ಭವ್ಯ ಸ್ವಾಗತ ಕೋರಿದ್ದರು. ಅಲ್ಲದೇ ಇಂಡಿಗೋ ಸಂಸ್ಥೆಯೂ ವಿಮಾನದಲ್ಲಿ ಜನಿಸಿದ ನವಜಾತ ಗಂಡು ಮಗುವಿಗೆ ಜೀವನ ಪರ್ಯಂತ ಉಚಿತ ಟಿಕೆಟ್‌ನ ಕೊಡುಗೆ ನೀಡಿತ್ತು.

ಇದನ್ನೂ ಓದಿ:ಮದ್ವೆಯಾಗಿ 54 ವರ್ಷದ ಬಳಿಕ ಮಗು ಜನನ; 75ನೇ ವಯಸ್ಸಿನಲ್ಲಿ ತಂದೆಯಾದ ಮಾಜಿ ಸೈನಿಕ

ABOUT THE AUTHOR

...view details