ಮೀರತ್(ಉತ್ತರ ಪ್ರದೇಶ): ಎಷ್ಟೋ ಮಹಿಳೆಯರು ತಮಗೆ ಒಂದು ಮಗು ಆಗಲಿ ಎಂದು ಹತ್ತಾರು ವ್ರತ, ಪೂಜೆ ಮಾಡುವುದುಂಟು. ಆದರೆ, ಮೀರತ್ನ ವೈದ್ಯಕೀಯ ಕಾಲೇಜಿನಲ್ಲಿ ಮಹಿಳೆಯೋರ್ವಳು ಏಕಕಾಲದಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹರಿಗೆಗೆಂದು ಮೀರತ್ನ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಗರ್ಭಿಣಿಗೆ ಹೆರಿಗೆ ಆಗಿದ್ದು, ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರಲ್ಲಿ ಒಂದು ಮಗುವನ್ನು ಈಗಾಗಲೇ ತಾಯಿಗೆ ಹಸ್ತಾಂತರ ಮಾಡಲಾಗಿದ್ದು, ಉಳಿದಂತೆ ಎರಡು ಮಕ್ಕಳನ್ನು NICUನಲ್ಲಿ ಇಡಲಾಗಿದೆ.
ಇದನ್ನೂ ಓದಿ:ವಂಚಕ ಪ್ರಿಯಕರನ ಮದುವೆ ತಡೆಯಲು ಓಡೋಡಿ ಬಂದ ಪ್ರಿಯತಮೆ! ಮುಂದೆ ಆಗಿದ್ದೇ ಬೇರೆ..
ಮೀರತ್ನ ದುರ್ಗಾನಗರದ ನಿವಾಸಿ ನೈನಾಗೆ ಇದು ಮೊದಲ ಹೆರಿಗೆ ಆಗಿದೆ. ಶಸ್ತ್ರಚಿಕಿತ್ಸೆ ಮೂಲಕ ಮೂವರು ನವಜಾತ ಶಿಶುಗಳನ್ನು ಹೊರಗೆ ತೆಗೆಯಲಾಗಿದ್ದು, ಮಕ್ಕಳ ಜನನದಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಇಬ್ಬರು ಗಂಡು ಮಕ್ಕಳಿದ್ದು, ಮತ್ತೊಂದು ಹೆಣ್ಣು ಮಗುವಿದೆ. ನೈನಾ ಅವರಿಗೆ ಸ್ತ್ರಿರೋಗ ಮತ್ತು ಪ್ರಸೂತಿ ವಿಭಾಗದ ಡಾ. ಅರುಣಾ ವರ್ಮಾ ಚಿಕಿತ್ಸೆ ನೀಡಿದ್ದು, ಮೂವರು ಮಕ್ಕಳ ತೂಕ ಕ್ರಮವಾಗಿ 2 ಕೆಜಿ, 1.9 ಹಾಗೂ 1.5 ಕೆಜಿ ಇದೆ. ಎಲ್ಲ ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯಕೀಯ ತಂಡ ತಿಳಿಸಿದೆ.