ನವದೆಹಲಿ: ಪೂರ್ವ ದೆಹಲಿಯ ಗಾಜಿಪುರ ಪ್ರದೇಶದಲ್ಲಿ 36 ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಗುರುವಾರ ಬೆಳಗ್ಗೆ ಪೊಲೀಸರಿಗೆ ಮಹಿಳೆ ಪತ್ತೆಯಾಗಿದ್ದಾಳೆ.
ಓದಿ:ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆಯ ಶಿಖರದತ್ತ ಹುಬ್ಬಳ್ಳಿ ಹೈದನ ದಿಟ್ಟ ಹೆಜ್ಜೆ: ದೇಹದಲ್ಲಿವೆ 6,500ಕ್ಕೂ ಹೆಚ್ಚು ಹೊಲಿಗೆ!
ಇಬ್ಬರಿಂದ ಅತ್ಯಾಚಾರ:ಬುಧವಾರ ರಾತ್ರಿ ಗಾಜಿಪುರ ಮುರಗ ಮಂಡಿ ಬಳಿ ಆಟೋ ಚಾಲಕ ಪೆಟ್ರೋಲ್ ಮುಗಿದಿದೆ ಎಂದು ಮಹಿಳೆಗೆ ಹೇಳಿ ಆಟೋವನ್ನು ದಾರಿಯಲ್ಲಿ ನಿಲ್ಲಿಸಿದ್ದಾನೆ. ಇದಾದ ನಂತರ ಆಟೋ ಚಾಲಕ ತನ್ನ ಸಹಚರನೊಬ್ಬನನ್ನು ಕರೆದಿದ್ದಾನೆ. ನಂತರ ಇಬ್ಬರೂ ಮಹಿಳೆಯನ್ನು ನಿರ್ಜನ ಪ್ರದಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಓದಿ:ಹಾರ್ದಿಕ್, ಜಡೇಜಾ, ಮಯಾಂಕ್, ಪ್ಲೆಸಿಸ್ ಮೊದಲ ಸಲ ನಾಯಕರು: ಯಾರಿಗಿದೆ ಕಪ್ ಎತ್ತಿ ಹಿಡಿಯುವ ಅದೃಷ್ಟ?
ಪೊಲೀಸರ ಹೇಳಿಕೆ: ಮಹಿಳೆ ರಕ್ತಸ್ರಾವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಮಹಿಳೆ ಆರೋಗ್ಯ ಸ್ಥಿರವಾಗಿದೆ. ಕೆಲಸ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ಹೋಗುತ್ತಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ. ಪೊಲೀಸರು ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳ ಪತ್ತೆಗೆ ಈಗಾಗಲೆ 5 ತಂಡಗಳನ್ನು ರಚಿಸಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಗುರುತಿಸಿ ಬಂಧಿಲಾಗುವುದೆಂದು ಪ್ರಕರಣದ ತನಿಖಾಧಿಕಾರಿ ಡಿಸಿಪಿ ಪ್ರಿಯಾಂಕಾ ಕಶ್ಯಪ್ ಹೇಳಿದ್ದಾರೆ.