ಸಿದ್ದಿಪೇಟೆ (ತೆಲಂಗಾಣ): ರೈತ ಮಹಿಳೆಯೊಬ್ಬರು 5 ಕಿ.ಲೋ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಬಹುಮಾನ ಗೆದ್ದಿದ್ದಾರೆ. ಸಿದ್ದಿಪೇಟೆಯಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ರೈತ ಮಹಿಳೆ ಬರಿಗಾಲಿನಲ್ಲಿ ಓಡಿ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ತೆಲಂಗಾಣ ಸಂಸ್ಥಾಪನಾ ದಿನದ ನಿಮಿತ್ತ ಓಟದ ಸ್ಪರ್ಧೆಯನ್ನು ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿತ್ತು. ಇದರಲ್ಲಿ 500 ಮಹಿಳೆಯರು ಭಾಗವಹಿಸಿದ್ದರು.
ಓಟದ ಸ್ಪರ್ಧೆಯಲ್ಲಿ ಹುಸ್ನಾಬಾದ್ ಕ್ಷೇತ್ರದ ಅಕ್ಕಣ್ಣಪೇಟೆ ಮಂಡಲದ ಮಲ್ಲಂಪಲ್ಲಿಯ ರೈತ ಮಹಿಳೆ ಮಲ್ಲಂ ರಾಮ ಪ್ರಥಮ ಬಹುಮಾನ ಪಡೆದರು. ಸ್ಥಳೀಯ ಶಾಸಕ ಸತೀಶ್ ಕುಮಾರ್ ಮತ್ತು ಸಿಪಿ ಶ್ವೇತಾ, ಮಹಿಳೆಯನ್ನು ಅಭಿನಂದಿಸಿ 1 ಲಕ್ಷ ರೂ. ಬಹುಮಾನವನ್ನು ನೀಡಿದರು. ಓಡುವ ಮೊದಲು ತಾನು ಅಭ್ಯಾಸ ಮಾಡಿರಲಿಲ್ಲ ಎಂದು ರಮಾ ಹೇಳಿಕೊಂಡಿದ್ದಾಳೆ. ಆದರೆ, ನಾನು ನಿತ್ಯ ನಮ್ಮ ಜಮೀನಿಗೆ ಮೂರು ಕಿಲೋಮೀಟರ್ ನಡೆದು ಎಮ್ಮೆಗಳನ್ನು ಕರೆದುಕೊಂಡು ಹೋಗುತ್ತಿದ್ದೆ. ಅದು ಸ್ಪರ್ಧೆಯಲ್ಲಿ ನನಗೆ ಸಹಾಯ ಮಾಡಿತು ಎಂದು ಹೇಳಿದರು.