ಕರ್ನಾಟಕ

karnataka

By

Published : Jun 24, 2022, 4:32 PM IST

Updated : Jun 24, 2022, 4:42 PM IST

ETV Bharat / bharat

ಗಂಡನ ಕೃಷಿ ಕೆಲಸಕ್ಕೆ ಸಾಥ್​​​​ ನೀಡಿದ 'ಡ್ರೋನ್'​ ರೈತ ಮಹಿಳೆ !

ಕನಕದುರ್ಗ ಎಂಬುವರು ಡ್ರೋನ್ ಆಪರೇಟ್ ಮಾಡುವ ಮಹಿಳೆ. ಇವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಕಾಜಾ ಗ್ರಾಮದವರು. ಪತಿ ಬಾಪಿರೆಡ್ಡಿ. ಈ ದಂಪತಿ ಜಮೀನನ್ನು ಗುತ್ತಿಗೆಗೆ ಪಡೆದು ಅದರಲ್ಲಿ ಕೃಷಿ ಮಾಡುತ್ತಿದ್ದಾರೆ.ಈಗ ಹೂ ಕೃಷಿ ಮಾಡುತ್ತಿದ್ದು, ಕೀಟನಾಶಕ ಸಿಂಪಡಣೆಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಬಾಪಿರೆಡ್ಡಿ ಸೆಕೆಂಡ್ ಹ್ಯಾಂಡ್ ಡ್ರೋನ್ ಖರೀದಿಸಿದ್ದರು. ಇದರ ನಿರ್ವಹಣೆಯನ್ನು ಕನಕದುರ್ಗ ಅವರು ಕಲಿತು ಅವರೇ ಈಗ ಗಿಡಗಳಿಗೆ ಔಷದ ಸಿಂಪಡಣೆ ಮಾಡುತ್ತಾರೆ..

ಗಂಡನ ಕೃಷಿ ಕೆಲಸಕ್ಕೆ ಸಾಥ್​​​​ ನೀಡಿದ 'ಡ್ರೋನ್'​ ರೈತ ಮಹಿಳೆ !
ಗಂಡನ ಕೃಷಿ ಕೆಲಸಕ್ಕೆ ಸಾಥ್​​​​ ನೀಡಿದ 'ಡ್ರೋನ್'​ ರೈತ ಮಹಿಳೆ !

ಗುಂಟೂರು (ಆಂಧ್ರಪ್ರದೇಶ) :ನಮ್ಮಲ್ಲಿ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಪುರುಷರೇ.. ಅದರಲ್ಲೂ ವಾಹನ ಚಾಲನೆ ಇರಬಹುದು ಅಥವಾ ಇನ್ಯಾವುದೇ ಯಂತ್ರಗಳ ನಿರ್ವಹಣೆ ಇರಬಹುದು. ಆದರೆ, ಇಲ್ಲೋರ್ವ ರೈತ ಮಹಿಳೆ ಸಂಪೂರ್ಣ ಅಪ್​ಡೇಟ್​ ಆಗಿದ್ದಾರೆ. ಡ್ರೋನ್​ ಆಪರೇಟ್​ ಮಾಡುವುದನ್ನು ಕಲಿತು ತಮ್ಮ ಪತಿಗೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.

ಕನಕದುರ್ಗ ಎಂಬುವರು ಡ್ರೋನ್ ಆಪರೇಟ್ ಮಾಡುವ ಮಹಿಳೆ. ಇವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮಂಗಳಗಿರಿ ಮಂಡಲದ ಕಾಜಾ ಗ್ರಾಮದವರು. ಪತಿ ಬಾಪಿರೆಡ್ಡಿ. ಈ ದಂಪತಿ ಜಮೀನನ್ನು ಗುತ್ತಿಗೆಗೆ ಪಡೆದು ಅದರಲ್ಲಿ ಕೃಷಿ ಮಾಡುತ್ತಿದ್ದಾರೆ.

ಗಂಡನ ಕೃಷಿ ಕೆಲಸಕ್ಕೆ ಸಾಥ್​​​​ ನೀಡಿದ 'ಡ್ರೋನ್'​ ರೈತ ಮಹಿಳೆ !

ಈಗ ಹೂ ಕೃಷಿ ಮಾಡುತ್ತಿದ್ದು, ಕೀಟನಾಶಕ ಸಿಂಪಡಣೆಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಬಾಪಿರೆಡ್ಡಿ ಸೆಕೆಂಡ್ ಹ್ಯಾಂಡ್ ಡ್ರೋನ್ ಖರೀದಿಸಿದ್ದರು. ಇದರ ನಿರ್ವಹಣೆಯನ್ನು ಕನಕದುರ್ಗ ಅವರು ಕಲಿತು ಅವರೇ ಈಗ ಗಿಡಗಳಿಗೆ ಔಷದ ಸಿಂಪಡಣೆ ಮಾಡುತ್ತಾರೆ.

ನಮ್ಮ ರಾಜ್ಯದಲ್ಲಿ ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಈಗಷ್ಟೇ ಹೆಚ್ಚಾಗುತ್ತಿದೆ. ತಾಂತ್ರಿಕ ಶಿಕ್ಷಣ ಓದಿದವರು ಮಾತ್ರ ಡ್ರೋನ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಆದರೆ, ನಾನು ಓದಿದ್ದು ಕೇವಲ 5ನೇ ತರಗತಿ ಎಂದು ನಗುತ್ತಲೇ ಹೇಳುತ್ತಾರೆ ಕನಕದುರ್ಗಾ. ಕನಕದುರ್ಗಾ ಡ್ರೋನ್ ಬಳಕೆ ಕಲಿತಿರುವುದರಿಂದ ಗಂಡನ ಕೆಲಸವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದಾರೆ. ಡ್ರೋನ್ ಮೂಲಕ ನಿಮಿಷಗಳಲ್ಲಿ ಕೆಲಸ ಮುಗಿಸಲಾಗುತ್ತಿದೆ ಅಂತಾರೆ ಬಾಪಿರೆಡ್ಡಿ.

ಇದನ್ನೂ ಓದಿ: 'ಬಿಬಿಎಂಪಿ ವಾರ್ಡ್ ವಿಂಗಡನೆ ಕಾರ್ಯ ಕೇಶವ ಕೃಪಾ, ಬಿಜೆಪಿ ಕಚೇರಿಯಲ್ಲಿ ನಡೆದಿದೆ'

Last Updated : Jun 24, 2022, 4:42 PM IST

ABOUT THE AUTHOR

...view details