ಮುಂಬೈ :ಮಹಾರಾಷ್ಟ್ರದ ಕೊಂಕಣ ಕರಾವಳಿಯು ವಿನಾಶಕಾರಿ ಮಳೆ ಮತ್ತು ಪ್ರವಾಹಕ್ಕೆ ಜನತೆ ಅಕ್ಷರಶಃ ನಲುಗಿದ್ದಾರೆ. ಮುಂಬೈನಿಂದ 250 ಕಿ.ಮೀ ದೂರದಲ್ಲಿರುವ ರತ್ನಾಗಿರಿಯ ಕರಾವಳಿ ಪಟ್ಟಣವಾದ ಚಿಪ್ಲೂಣ್ ಪ್ರದೇಶದ ಜನ ವರುಣಾರ್ಭಟಕ್ಕೆ ಬೆಚ್ಚಿಬಿದ್ದಿದ್ದಾರೆ.
ಚಿಪ್ಲೂಣ್ ಪ್ರದೇಶದ ನೆರೆಯ ರಕ್ಷಣಾ ಕಾರ್ಯಾಚರನೆಯ ಭಯಾನಕ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಳಗಡೆ ರಭಸವಾಗಿ ಹರಿಯುತ್ತಿರುವ ನೀರು.. ಕಟ್ಟಡದ ಮಹಡಿ ಮೇಲೊಂದರಲ್ಲಿ ನಿಂತ ರಕ್ಷಣಾ ಪಡೆ ಮಹಿಳೆಯೊಬ್ಬರನ್ನು ಹಗ್ಗದ ಮೂಲಕ ರಕ್ಷಿಸುತ್ತಿದ್ದಾರೆ.
ಸ್ವಲ್ಪ ಯಾಮಾರಿದರೂ ಪ್ರಾಣವೇ ಹೋಗುವ ಭೀತಿ. ಇಂತಹ ಸ್ಥಿತಿಯಲ್ಲಿ ಪ್ರವಾಹಕ್ಕೆ ಸಿಲುಕಿದ ಪ್ರದೇಶದಿಂದ ಮಹಿಳೆಯನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದ ವೇಳೆ ರಕ್ಷಣಾ ಕಾರ್ಯಾಚರಣೆಯ ತಂಡದಿಂದ ಹಗ್ಗ ಕೈ ಜಾರಿದೆ. ಪರಿಣಾಮ ಮಹಿಳೆ ಪ್ರವಾಹದ ನೀರಿನಲ್ಲಿ ಬೀಳುತ್ತಾರೆ. 11 ಸೆಕೆಂಡುಗಳ ಈ ವಿಡಿಯೋ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.
70,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚಿಪ್ಲೂಣ್ನ ಶೇ.50ಕ್ಕೂ ಹೆಚ್ಚು ಪ್ರದೇಶವು ಪ್ರವಾಹದ ನೀರಿನಲ್ಲಿ ಮುಳುಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 5,000ಕ್ಕೂ ಹೆಚ್ಚು ಜನರು ನೆರೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ವರುಣಾರ್ಭಟ.. ಭೂಕುಸಿತ.. ಪ್ರವಾಹಕ್ಕೆ ನಲುಗಿದ ಜನ!