ಹೈದರಾಬಾದ್:ಪತಿ ತನ್ನ ಇಚ್ಛೆಯಂತೆ ರವಿಕೆ ಹೊಲಿದು ಕೊಟ್ಟಿಲ್ಲ ಎಂದು ಬೇಸರಗೊಂಡ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ವರದಿಯಾಗಿದೆ.
ಶ್ರೀನಿವಾಸ್ ಎಂಬುವವರ ಪತ್ನಿ ವಿಜಯಲಕ್ಷ್ಮಿ (36) ಮೃತರು. ಈ ದಂಪತಿ ಹೈದರಾಬಾದ್‌ನ ಅಂಬರಪೇಟ್‌ನಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರವನ್ನೂ ಮಾಡುತ್ತಿದ್ದರು. ಇವರು ಶನಿವಾರ ತಮ್ಮ ಪತ್ನಿ ವಿಜಯಲಕ್ಷ್ಮಿಗೆ ರವಿಕೆ ಹೊಲಿದು ಕೊಟ್ಟಿದ್ದಾರೆ. ಆದರೆ ಆಕೆಗೆ ರವಿಕೆ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.