ಕರ್ನಾಟಕ

karnataka

ETV Bharat / bharat

ವೈದ್ಯೆ ಆತ್ಮಹತ್ಯೆ: NEET ಭಯದಿಂದ ದುರಂತ ಎಂದ ಪೋಷಕರು - Woman Doctor dies by suicide in Tamilnadus Coimbatore

ಪೊಲೀಸರ ಪ್ರಕಾರ ರಾಸಿ ಪಿಜಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ವೈದ್ಯೆ ಪರೀಕ್ಷೆಯ ಭಯದಲ್ಲಿದ್ದರು ಎನ್ನಲಾಗಿದೆ.

NEET ಭಯದಿಂದ ದುರಂತ ಎಂದ ಪೋಷಕರು
NEET ಭಯದಿಂದ ದುರಂತ ಎಂದ ಪೋಷಕರು

By

Published : May 20, 2022, 5:42 PM IST

Updated : May 20, 2022, 6:59 PM IST

ಕೊಯಮತ್ತೂರು: ಪಿಜಿ ನೀಟ್‌ಗೆ ತಯಾರಿ ನಡೆಸುತ್ತಿದ್ದ ವೈದ್ಯೆ ಗುರುವಾರ ಮೆಟ್ಟುಪಾಳ್ಯಂನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯೆ ರಾಶಿ (27) ಅವರು ಜವಳಿ ಅಂಗಡಿ ನಡೆಸುತ್ತಿರುವ ಅಭಿಷೇಕ್ (30) ಅವರನ್ನು 6 ತಿಂಗಳ ಹಿಂದೆ ವಿವಾಹವಾಗಿದ್ದರು. ರಾಸಿ 2020 ರಲ್ಲಿ ತನ್ನ MBBS ಪೂರ್ಣಗೊಳಿಸಿದ್ದರು.

ಪೊಲೀಸರ ಪ್ರಕಾರ ರಾಸಿ ಪಿಜಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆಕೆ ಪರೀಕ್ಷೆಯ ಭಯದಲ್ಲಿದ್ದರು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕೆಯ ತಾಯಿ ಸೆಂತಾಮರೈ ರಾಸಿಯ ಕೋಣೆಯ ಬಾಗಿಲು ತಟ್ಟಿದ್ದಾರೆ. ಅವರು ಪ್ರತಿಕ್ರಿಯಿಸದ ಕಾರಣ, ಸೆಂತಾಮರೈ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕುಟುಂಬಸ್ಥರು ಮೆಟ್ಟುಪಾಳ್ಯಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:15 ವರ್ಷಗಳಲ್ಲಿ ಬೆಂಗಳೂರಿಗೆ ಕೊಟ್ಟ ಅನುದಾನ : ಸಮಗ್ರ ತನಿಖೆಗೆ ಹೆಚ್​ಡಿಕೆ ಒತ್ತಾಯ

Last Updated : May 20, 2022, 6:59 PM IST

ABOUT THE AUTHOR

...view details