ಕರ್ನಾಟಕ

karnataka

ETV Bharat / bharat

ತಂದೆಗೆ ಭಾವನಾತ್ಮಕ ಪತ್ರ ಬರೆದು ನವ ವಿವಾಹಿತೆ ವೈದ್ಯೆ ಆತ್ಮಹತ್ಯೆ: ಸುಸೈಡ್ ಕಾರಣ ಇನ್ನೂ ನಿಗೂಢ! - ತಂದೆಗೆ ಪತ್ರ ಬರೆದು ಮಹಿಳಾ ವೈದ್ಯೆ ಆತ್ಮಹತ್ಯೆ

ಡಾ. ಪ್ರಾಂಜಲ್ ಜ್ಞಾನೇಶ್ವರಿ ಕೊಲ್ಹೆ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಲ್ನಾ ಜಿಲ್ಲೆಯ ಭೋಕರ್ದನ್‌ನ ಶಿವಾಜಿ ನಗರದ ಲಾಯಿನ್‌ಕಮ್ ಸೊಸೈಟಿಯಲ್ಲಿ ಪತ್ನಿ ಡಾ. ಪ್ರಂಜಲ್ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

Woman Doctor
Woman Doctor

By

Published : May 31, 2021, 4:09 PM IST

Updated : May 31, 2021, 4:23 PM IST

ಭೋಕರ್ದನ್ (ಮಹಾರಾಷ್ಟ್ರ):'ನನ್ನ ಸಾವಿಗೆ ಯಾರನ್ನೂ ದೂಷಿಸಬೇಡಿ. ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ ಕ್ಷಮಿಸಿ ಪಪ್ಪಾ' ಎಂದು ತಂದೆಗೆ ಭಾವನಾತ್ಮಕ ಪತ್ರ ಬರೆದು 24 ವರ್ಷದ ನವ ವಿವಾಹಿತೆ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡಾ.ಪ್ರಂಜಲ್ ಜ್ಞಾನೇಶ್ವರಿ ಕೊಲ್ಹೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರ ನಿವಾಸದಲ್ಲಿ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ತಿಂಗಳ ಹಿಂದೆ ನಗರದ ಜನೈ ಆಸ್ಪತ್ರೆಯ ನಿರ್ದೇಶಕ ಡಾ. ಪ್ರಂಜಲ್ ಅವರ ಜತೆ ವಿವಾಹ ಆಗಿತ್ತು. ಇಬ್ಬರೂ ಜನೈ ಆಸ್ಪತ್ರೆ ತೆರೆದು ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: ಕೋವಿಡ್‌ ಸೋಂಕಿತನ ಮೃತದೇಹ ನದಿಗೆಸೆದ ಪ್ರಕರಣದಲ್ಲಿ ಇಬ್ಬರು ಅರೆಸ್ಟ್‌

ವೈದ್ಯರಾಗಿರುವ ನವವಿವಾಹಿತೆಯ ಆತ್ಮಹತ್ಯೆಯ ಬಗ್ಗೆ ವ್ಯಾಪಕ ಕಳವಳ ವ್ಯಕ್ತವಾಗಿದ್ದು, ನಗರದ ಗ್ರಾಮೀಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಭಾನುವಾರ ಸಂಜೆ 7 ಗಂಟೆಗೆ ಸ್ವಗ್ರಾಮ ಬಾರಂಜಲ ಸೇಬಲ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಡಾ.ಪ್ರಂಜಲ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ, ಆಕೆ ತನ್ನ ತಂದೆಯ ಹೆಸರಿಗೆ ಬರೆದ ಪತ್ರವು ಪೊಲೀಸರ ಕೈಸೇರಿದೆ. ಆ ಪತ್ರದಲ್ಲಿ ಡಾ. ಪ್ರಣಾಲ್ ತನ್ನ ತಂದೆಗೆ 'ಅಪ್ಪಾ, ನನ್ನನ್ನು ಕ್ಷಮಿಸು, ನಾನು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕಾಗಿ ಯಾರನ್ನೂ ದೂಷಿಸಬಾರದು' ಮನವಿ ಮಾಡಿದ್ದಾಳೆ. ಭೋಕರ್ದನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Last Updated : May 31, 2021, 4:23 PM IST

ABOUT THE AUTHOR

...view details