ರಾಂಚಿ (ಜಾರ್ಖಂಡ್): ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಮಂದಾರ್ ಬ್ಲಾಕ್‌ನಲ್ಲಿ ಕಾಯಿಲೆಯಿಂದ ಬಳಲುತ್ತಿದ್ದ 63 ವರ್ಷದ ದುಗಿಯಾ ಒರಾನ್ ಎಂಬ ವೃದ್ಧೆ ಹಸಿವಿನಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ಜರುಗಿದೆ.
ನಾಗ್ಡಾ ಪಂಚಾಯತ್ ನಿವಾಸಿ ತನ್ನ ಸಹೋದರಿ ಮತ್ತು 22 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಮಹಿಳೆಯ ಸೋದರಸಂಬಂಧಿ ಆಸ್ತಿಯನ್ನು ಕಸಿದುಕೊಂಡು ಅವರನ್ನು ನಿರಾಶ್ರಿತರನ್ನಾಗಿ ಮಾಡಿದ್ದರು. ಆ ಮಹಿಳೆ ನಂತರ ಸುರ್ಸಾ ಪಂಚಾಯಿತಿಯಲ್ಲಿ ವಾಸಿಸುತ್ತಿದ್ದರು.
ಕಳೆದ 3 ವರ್ಷಗಳಿಂದ ಮಂದಾರ್‌ನ ಸಮಾಜ ಸೇವಕರೊಬ್ಬರು ತಮ್ಮ ಮನೆಯಲ್ಲಿ ಅವರಿಗೆ ಕೊಠಡಿ ನೀಡಿ ವೃದ್ಧೆಗೆ ಆಶ್ರಯ ಒದಗಿಸಿದ್ದರು. ಸಾಂಕ್ರಾಮಿಕ ಸಮಯದಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು.
ಕುಟುಂಬವು ಪಡಿತರ ಚೀಟಿ ನೀಡುವಂತೆ ಸರ್ಪಂಚ್‌ಗೆ ಹಲವು ಬಾರಿ ವಿನಂತಿಸಿತ್ತಂತೆ. ಆದರೆ ಅವರು ಬೇರೆ ಪಂಚಾಯಿತಿಗೆ ಸೇರಿದವರು ಎಂಬ ಕಾರಣಕ್ಕೆ ರೇಷನ್ ಕಾರ್ಡ್ ನೀಡಿರಲಿಲ್ಲವಂತೆ.
ಸರ್ಪಂಚ್ ಪ್ರಕಾರ, ಅವರು ಪ್ರದೇಶದ ವ್ಯಾಪಾರಿಗಳಿಗೆ ಸಮಾನವಾಗಿ ಸಹಾಯ ಮಾಡುವಂತೆ ಸೂಚನೆ ನೀಡಿದ್ದರು. ವ್ಯಾಪಾರಿ ಅವರಿಗೆ ತಿಂಗಳಿಗೆ 10 ರಿಂದ 15 ಕೆಜಿ ಅಕ್ಕಿಯನ್ನು ನೀಡುತ್ತಿದ್ದರಂತೆ.
ಘಟನೆಯ ನಂತರ ಬಿಡಿಒ ಸುಲೇಮಾನ್ ಮುಂಡ್ರಿ ಮಹಿಳೆಯ ಮನೆಗೆ ಭೇಟಿ ನೀಡಿ, ಪರಿಶೀಲಿಸಿದರು. ಆದರೆ ಈ ಘಟನೆಯನ್ನು ಜಿಲ್ಲಾಧಿಕಾರಿ ಮಾತ್ರ ವೃದ್ಧೆ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.
Ranchi (Jharkhand):A 63-year-old woman, Dugiya Oraon, allegedly died of starvation and disease in the Mandar block of the district in Jharkhand.
District officials, however, denied the claims they said enough food grains were found in her house.