ಕರ್ನಾಟಕ

karnataka

ETV Bharat / bharat

ವಿಚ್ಛೇದಿತ ಗೆಳೆಯನೊಂದಿಗೆ ವಿಡಿಯೋಕಾಲ್‌ನಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ

ಜಾರ್ಖಂಡ್​ನ ರಾಮಗಢದಲ್ಲಿ ವಿವಾಹಿತ ಮಹಿಳೆಯೊಬ್ಬರು ತನ್ನಿಂದ ದೂರವಾದ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರಿಯಕರ ಮಂಜಿತ್ ಕುಮಾರ್
ಪ್ರಿಯಕರ ಮಂಜಿತ್ ಕುಮಾರ್

By

Published : Jan 10, 2023, 6:29 PM IST

ಬರ್ಲಂಗಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ರಘುನಾಥ್ ಸಿಂಗ್ ಅವರು ಮಾತನಾಡಿದರು

ರಾಮಗಢ (ಜಾರ್ಖಂಡ್): ವಿವಾಹಿತ ಮಹಿಳೆಯೊಬ್ಬರು ದೂರವಾಗಿರುವ ಗೆಳೆಯನೊಂದಿಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರಾಮಗಢದಲ್ಲಿ ನಡೆದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮಹಿಳೆಯ ಪ್ರಿಯಕರ ಮಂಜಿತ್ ಕುಮಾರ್ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಹಿಳೆಯು ವಿರಹ ವೇದನೆಯನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಆರೋಪಿಗಳು ರೆಕಾರ್ಡ್ ಮಾಡಿರುವ ವಿಡಿಯೋ ಕಾಲ್ ಸ್ಕ್ರೀನ್ ಆಧರಿಸಿ ಈ ಬಂಧನ ಮಾಡಲಾಗಿದೆ. ಮೃತ ಮಹಿಳೆಯನ್ನು ಪಾಯಲ್ ಕುಮಾರಿ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ ನೀಡಿದ ಬರ್ಲಂಗಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ರಘುನಾಥ್ ಸಿಂಗ್, ’’ಮೃತ ಮಹಿಳೆ ಪಾಯಲ್ ಕುಮಾರಿ ಎಂದು ಗುರುತಿಸಲಾಗಿದೆ. 2022 ರ ನವೆಂಬರ್ 19 ರಂದು ಪುರಬತಾಡ್ ಗ್ರಾಮದ ಆಕೆಯ ಅತ್ತೆಯ ಮನೆಯಲ್ಲಿ ಶವ ಪತ್ತೆಯಾಗಿದೆ. ತಂದೆ ತಪೇಶ್ವರ್ ಸಿಂಗ್, ಮೃತರ ಪತಿ ವಿಶಾಲ್ ಸಿಂಗ್, ಮಾವ ತೇಜು ಸಿಂಗ್, ಅತ್ತೆ ಬುಧ್ನಿ ದೇವಿ ಮತ್ತು ಸೋದರ ಮಾವ ವೀರು ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದೇವೆ‘‘ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು,’’ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು. ನಂತರ ಮಹಿಳೆ ಮಂಜಿತ್ ಕುಮಾರ್ ಜೊತೆ ವಿವಾಹೇತರ ಸಂಬಂಧವನ್ನು ಹೊಂದಿದ್ದರು ಎಂಬುದು ತಿಳಿದುಬಂದಿದೆ. ಈ ಸಂಬಂಧದ ವಿಷಯ ತಿಳಿದ ವಿಶಾಲ್ ಕೋಪಗೊಂಡು ಮಂಜಿತ್ ಮತ್ತು ಪಾಯಲ್ ಅವರೊಂದಿಗೆ ಜಗಳವಾಡಿದ್ದಾರೆ. ಆದರೆ, ಪಾಯಲ್ ಮಂಜಿತ್ ಜೊತೆ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಆದರೆ, ಮಂಜಿತ್ ಪಾಯಲ್‌ನಿಂದ ದೂರವಾಗಲು ಪ್ರಾರಂಭಿಸಿದ್ದಾನೆ. ಅದು ಅವಳನ್ನು ಅಸಮಾಧಾನಗೊಳಿಸಿತ್ತು ಎನ್ನಲಾಗಿದೆ.

ವಡೋದರಾ (ಗುಜರಾತ್): ಮತ್ತೊಂದು ಪ್ರಕರಣದಲ್ಲಿ ವಡೋದರಾದಲ್ಲಿ​ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ನೋವಿನ ಘಟನೆ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬದ ಸದಸ್ಯರೊಬ್ಬರು ಗೋಡೆಯ ಮೇಲೆ ಪತ್ರ ಬರೆದಿದ್ದಾರೆ. ಇದರಲ್ಲಿ ಆರ್ಥಿಕ ಹೊರೆ ಹೆಚ್ಚಿದೆ ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪೋಸ್ಟ್ ಮಾರ್ಟಮ್​ಗಾಗಿ ಇಂದು ಬೆಳಗ್ಗೆ ಎಲ್ಲ ಮೃತದೇಹಗಳನ್ನು ಎಸ್​ಎಸ್​ಜಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೇ ವೇಳೆ ಮೃತರು ಮನೆಯ ಗೋಡೆಯ ಮೇಲೆ ಆತ್ಮಹತ್ಯೆ ಪತ್ರ ಬರೆದಿದ್ದರು. ಇದರಲ್ಲಿ ಸಾಲ ಹೆಚ್ಚಾಗಿರುವ ಪ್ರಸ್ತಾಪವಿದೆ ಎಂದಿದ್ದಾರೆ.

ಓದಿ:ಕ್ಷಮಿಸಿ ಮಮ್ಮಿ ನಾವು ನಮ್ಮ ಆಸೆಯಂತೆ ಆತ್ಮಹತ್ಯೆ ಮಾಡಿಕೊಂಡಿದ್ದೇವೆ: ಸಾಮೂಹಿಕ ಆತ್ಮಹತ್ಯೆ

ABOUT THE AUTHOR

...view details