ರಾಯದುರ್ಗ (ಆಂಧ್ರಪ್ರದೇಶ): ರಸ್ತೆಯಲ್ಲಿ ಶೇಖರಣೆಯಾಗಿದ್ದ ನೀರಿನ ಮೇಲೆ ಕಾರೊಂದು ವೇಗವಾಗಿ ಬಂದ ಹಿನ್ನೆಲೆ ಪಕ್ಕದಲ್ಲಿ ಸಾಗುತ್ತಿದ್ದ ದ್ವಿಚಕ್ರ ಸಾವರರ ಮೇಲೆ ನೀರು ಬಿದ್ದಿದೆ. ಬಳಿಕ ಹೀಗೇಕೆ ಮಾಡಿದೆ ಎಂದು ಬೈಕ್ ಸವಾರರು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರು ಚಾಲಕ, ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಗಚಿಬೌಲಿಯ ಎಐಜಿ ಬಳಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ರಾಯದುರ್ಗ ಇನ್ಸ್ಪೆಕ್ಟರ್ ಎಂ.ಮಹೇಶ್, ಎರ್ರಗಡ್ಡದ ಸೈಯದ್ ಸೈಫುದ್ದೀನ್ (27) ಎಂಬ ವ್ಯಾಪಾರಿ ಇದೇ 18ರಂದು ಮಧ್ಯರಾತ್ರಿ 1.30 ಕ್ಕೆ ಪತ್ನಿ ಮರಿಯಾ ಮಿರ್ (25) ಜೊತೆ ಹಾಗೂ ಸಹೋದರರಾದ ಸೈಯದ್ ಮಿರಾಜುದ್ದೀನ್ (24) ಅವರು ರಶೀದ್ ಮಾಶಾ ಉದ್ದೀನ್ (19) ಅವರೊಂದಿಗೆ ಎರ್ರಗಡ್ಡದಿಂದ ಮಾದಾಪುರ ತಂತಿ ಸೇತುವೆ ಮೂಲಕ ಎರಡು ದ್ವಿಚಕ್ರ ವಾಹನಗಳಲ್ಲಿ ಗಚ್ಚಿಬೌಲಿಗೆ ತೆರಳುತ್ತಿದ್ದರು.
ಎಐಜಿ ಆಸ್ಪತ್ರೆ ಬಳಿ ಸಾಗಿದಾಗ ಬೆಂಜ್ ಕಾರಿನಲ್ಲಿ ತೆರಳುತ್ತಿದ್ದ ಜುಬ್ಲಿ ಹಿಲ್ಸ್‌ನ ಉದ್ಯಮಿ ರಾಜಸಿಂಹ ರೆಡ್ಡಿ (26) ರಸ್ತೆಯಲ್ಲಿ ಸಂಗ್ರಹವಾಗಿದ್ದ ನೀರಿನ ಮೇಲೆ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಈ ನೀರು ದ್ವಿಚಕ್ರ ವಾಹನದ ಮೇಲೆ ಬಿದ್ದಿದ್ದು, ಸೈಫುದ್ದೀನ್ ಸಹೋದರರು ಕಾರು ಚಾಲಕನನ್ನು ಹಿಂಬಾಲಿಸಿ, ಯಾಕೆ ಹೀಗೆ ಮಾಡಿದೆ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.