ಕರ್ನಾಟಕ

karnataka

ETV Bharat / bharat

ಕೊಠಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಳು ಅಮ್ಮ; ಮಹಿಳಾ ಪೊಲೀಸ್‌ ಅಕ್ಕರೆಗೆ ನಲಿದಾಡಿತು ಕಂದಮ್ಮ - Woman Constable Takes Care Of Infant

ಮಹಿಳೆಯೊಬ್ಬರು ತಮ್ಮ 6 ತಿಂಗಳ ಮಗುವಿನ ಸಮೇತ ಹೈಕೋರ್ಟ್​ ಜವಾನ​ ಹುದ್ದೆ ಪರೀಕ್ಷೆಗೆ ಹಾಜರಾದಾಗ, ಮಹಿಳಾ ಕಾನ್​ಸ್ಟೇಬಲ್​ ಆ ಮಗುವನ್ನು ಪರೀಕ್ಷೆ ಮುಗಿಯುವವರೆಗೂ ಆರೈಕೆ ಮಾಡಿದ ಘಟನೆ ಗುಜರಾತ್​ನಲ್ಲಿ ನಡೆಯಿತು.

ಮಗುವಿನ ಪಾಲನೆ ಮಾಡಿದ ಪೊಲೀಸ್
ಮಗುವಿನ ಪಾಲನೆ ಮಾಡಿದ ಪೊಲೀಸ್

By

Published : Jul 11, 2023, 10:24 AM IST

ಅಹಮದಾಬಾದ್ (ಗುಜರಾತ್​):ಹೆಣ್ಣೆಂದರೆ ಹಾಗೆಯೇ. ಭೂಮಿ ಭಾರವನ್ನೂ ಹೊರುತ್ತಾಳೆ, ಯಾರದೇ ಕಣ್ಣೀರಿಗೂ ಮಿಡಿಯುತ್ತಾಳೆ. ಅದಕ್ಕೆ ಅಲ್ವೇ ನಾರಿಯರಿಗೆ ವಿಶ್ವಮನ್ನಣೆ ಇರೋದು. ಗುಜರಾತ್​ ಹೈಕೋರ್ಟ್​ ಜವಾನ (ಪ್ಯೂನ್​) ಹುದ್ದೆಯ ಪರೀಕ್ಷೆಗೆ ಮಹಿಳೆಯೊಬ್ಬರು ಹಾಜರಾಗಿದ್ದರೆ, ಆಕೆಯ ಮಗುವನ್ನು ಮಹಿಳಾ ಪೊಲೀಸ್​ ಕಾನ್​ಸ್ಟೇಬಲ್​ ಒಬ್ಬರು ಎತ್ತಿಕೊಂಡು ಪರೀಕ್ಷೆ ಮುಗಿಸಿ ಬರುವವರೆಗೂ ರಕ್ಷಣೆ ಒದಗಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಗು ಕೂಡ ಆಕೆಯೊಂದಿಗೆ ನಗುತ್ತಾ ನಲಿದಾಡಿದೆ.

ಭಾನುವಾರದಂದು ಗುಜರಾತ್‌ ಹೈಕೋರ್ಟ್​ನ ಜವಾನ ಹುದ್ದೆಗೆ ಪರೀಕ್ಷೆ ನಡೆದಿದೆ. 6 ತಿಂಗಳ ಮಗುವಿನ ಸಮೇತ ಬಂದಿದ್ದ ಮಹಿಳೆಗೆ ಕೇಂದ್ರಕ್ಕೆ ಭದ್ರತೆ ನೀಡಲು ನಿಯೋಜಿಸಲಾಗಿದ್ದ ಮಹಿಳಾ ಕಾನ್​ಸ್ಟೇಬಲ್​ ದಯಾ ಬೆನ್​ ಎಂಬಾಕೆ ನೆರವಾಗಿದ್ದಾರೆ. ಪರೀಕ್ಷೆಗೆ ಕೆಲವೇ ನಿಮಿಷಗಳಿದ್ದಾಗ ಮಗು ಅಳಲು ಶುರು ಮಾಡಿದೆ. ಮಹಿಳೆ ಸಂತೈಸಿದರೂ ಅದು ರಚ್ಚೆ ಬಿಡಲಿಲ್ಲ. ಇದರಿಂದ ಪರೀಕ್ಷೆ ಬರೆಯುವುದು ಕಷ್ಟ ಎಂಬಂತಾಗಿತ್ತು. ಇದೇ ವೇಳೆ ಅಲ್ಲಿದ್ದ ದಯಾ ಬೆನ್​ ಅವರು ತಾವು ಮಗುವನ್ನು ನೋಡಿಕೊಳ್ಳುವುದಾಗಿ ಮಹಿಳೆಗೆ ಹೇಳಿದ್ದಾರೆ.

ಅದರಂತೆ 6 ತಿಂಗಳ ಮಗುವನ್ನು ದಯಾ ಬೆನ್​ ಅವರಿಗೆ ನೀಡಿದ ಮಹಿಳೆ ಪರೀಕ್ಷೆಗೆ ಹಾಜರಾಗಿದ್ದಾರೆ. ಇತ್ತ ಮಹಿಳಾ ಕಾನ್​ಸ್ಟೇಬಲ್​ ತಾಯಿ ಪರೀಕ್ಷೆ ಬರೆದು ಹೊರಬರುವವರೆಗೂ ಮಗುವನ್ನು ಅಕ್ಕರೆಯಿಂದ ನೋಡಿಕೊಂಡಿದ್ದಾರೆ. ಮಗು ಆಕೆಯೊಂದಿಗೆ ಸಂತೋಷದಿಂದಲೇ ನಲಿದಾಡಿದೆ. ಇದರ ಚಿತ್ರಗಳನ್ನು ಅಹಮದಾಬಾದ್​ ಪೊಲೀಸರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ಯೂನ್​ ಹುದ್ದೆಗೆ ಮಹಿಳಾ ಪರೀಕ್ಷಾರ್ಥಿಯ ಅಮೂಲ್ಯ ಸಮಯ ವ್ಯರ್ಥವಾಗದಂತೆ ಮತ್ತು ಉತ್ತಮವಾಗಿ ಪರೀಕ್ಷೆ ಬರೆಯಲು ನಮ್ಮ ಸಿಬ್ಬಂದಿ ಆಕೆಯ ಮಗುವನ್ನು ನೋಡಿಕೊಂಡರು' ಎಂದು ಒಕ್ಕಣೆ ನೀಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿವೆ. ನೆಟ್ಟಿಗರು ದಯಾ ಬೆನ್​ ಅವರ ಮಾತೃ ಹೃದಯಕ್ಕೆ ಭೇಷ್​ ಎಂದಿದ್ದಾರೆ.

ನೆಟ್ಟಿಗರ ಸ್ಪಂದನೆ:ಮಹಿಳಾ ಪೊಲೀಸ್​ ಸಿಬ್ಬಂದಿಯ ಕಾರ್ಯವನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ''ಮೇಡಂ ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ'' ಎಂದು ಒಬ್ಬರು ಬರೆದುಕೊಂಡರೆ, ''ಮಹಿಳಾ ಪೊಲೀಸ್ ಸಿಬ್ಬಂದಿಯಾದ ದಯಾಬೆನ್ ಅವರು ಮಹಿಳಾ ಪರೀಕ್ಷಾರ್ಥಿಯ ಮಗುವಿಗೆ ಕೆಲ ಕಾಲ ತಾಯಿಯಾಗುವ ಮೂಲಕ ತಾಯಿ ಪ್ರೀತಿಯನ್ನು ಎತ್ತಿ ಹಿಡಿದಿದ್ದಾರೆ'' ಎಂದು ಇನ್ನೊಬ್ಬರು ಹೊಗಳಿದ್ದಾರೆ.

''ಇದು ನಿಜವಾದ ಪೊಲೀಸರ ಸಂಕೇತವಾಗಿದೆ. ಈಗಿನ ಕಾಲದಲ್ಲಿ ಮಗುವು ಅಳುತ್ತಿದ್ದರೆ, ಪೊಲೀಸರು ಬಂದು ಗದರಿಸುವುದು ವಾಡಿಕೆ. ಆದರೆ, ಇದು ಹಾಗಾಗಿಲ್ಲ ಎಂದಿದ್ದಾರೆ. ಮತ್ತೊಬ್ಬಾತ ''ಇದೊಂದು ಶ್ಲಾಘನೀಯ ಕೆಲಸ. ಅಹಮದಾಬಾದ್ ಪೊಲೀಸ್ ಕುಟುಂಬಕ್ಕೆ ಸೆಲ್ಯೂಟ್'' ಎಂದರೆ, ''ಮನುಕುಲವೇ ಮೆಚ್ಚುವ ಅನುಕರಣೀಯ ಕೆಲಸ" ಎಂದು ಇನ್ನೊಬ್ಬ ಬಳಕೆದಾರ ಬಣ್ಣಿಸಿದ್ದಾನೆ.

ಇದನ್ನೂ ಓದಿ:ಫ್ರಾನ್ಸ್​ನಿಂದ ಇನ್ನೂ 26 ರಫೇಲ್​ ಫೈಟರ್​ ಜೆಟ್, 3 ಸ್ಕಾರ್ಪೀನ್​ ಸಬ್​ಮೆರಿನ್​​ ಖರೀದಿಗೆ ಭಾರತ ಚಿಂತನೆ?

ABOUT THE AUTHOR

...view details