ಕರ್ನಾಟಕ

karnataka

ETV Bharat / bharat

ಪೊಲೀಸರು ಕೇಸ್​ ದಾಖಲು ಮಾಡಿಕೊಳ್ಳದೇ ಇರುವುದು ಮಗಳ ಸಾವಿಗೆ ಕಾರಣ... ಪೋಷಕರ ಆರೋಪ

ಕೌಟುಂಬಿಕ ದೌರ್ಜನ್ಯ ಪ್ರಕರಣದಡಿ ಪೊಲೀಸರು ಕೇಸ್​ ದಾಖಲು ಮಾಡಿಕೊಂಡಿದ್ದರೆ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಮೃತ ಯುವತಿ ಪೋಷಕರು ಆರೋಪ ಮಾಡಿದ್ದಾರೆ.

Woman commits suicide
Woman commits suicide

By

Published : Sep 2, 2021, 5:26 AM IST

Updated : Sep 2, 2021, 12:16 PM IST

ಕಣ್ಣೂರು(ಕೇರಳ):26 ವರ್ಷದ ಯುವತಿಯೋರ್ವಳು ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ಕಳೆದ ಆಗಸ್ಟ್​​ 29ರಂದು ನಡೆದಿದೆ. ಈ ಪ್ರಕರಣ ನಡೆಯಲು ಪೊಲೀಸರು ಕೇಸ್​​ ದಾಖಲು ಮಾಡಿಕೊಳ್ಳದೇ ಇರುವುದು ಎಂದು ಆಕೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ

26 ವರ್ಷದ ವಿವಾಹಿತ ಮಹಿಳೆ ಸುನೀಶಾ(Suneesha) ಆಗಸ್ಟ್​​29ರಂದು ಪತಿ ವಿಜೀಶ್​​ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆ ಪೊಲೀಸರು ಇದೊಂದು ಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದರು. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಒಂದು ವಾರ ಮುಂಚಿತವಾಗಿ ಠಾಣೆಯಲ್ಲಿ ದೂರು ನೀಡಿದರೂ ಕೂಡ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೇಸ್​ ದಾಖಲು ಮಾಡಿಕೊಳ್ಳುವ ಬದಲು ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪ ಮಾಡಿದ್ದಾರೆ.

ಸುನೀಶಾ ಹಾಗೂ ವಿಜೀಶ್ ನಡುವಿನ ಮಾತಿನ ವಾಗ್ವಾದದ ಹಾಗೂ ವಿಜೀಶ್ ತಾಯಿ ನೀಡಿರುವ ಕಿರುಕುಳದ ಕೆಲವೊಂದು ಆಡಿಯೋ ತುಣುಕ ಇದೀಗ ರಿಲೀಸ್​ ಆಗಿದ್ದು, ಇದರಲ್ಲಿ ತನ್ನ ಗಂಡನ ಮನೆಯವರಿಂದ ರಕ್ಷಣೆ ಮಾಡುವಂತೆ ಆಕೆ ಮನವಿ ಮಾಡಿಕೊಂಡಿದ್ದಳು ಎನ್ನಲಾಗಿದೆ. ಗಂಡನ ಮನೆಯವರು ಮೇಲಿಂದ ಮೇಲೆ ಸುನೀಶಾ ಮೇಲೆ ಹಲ್ಲೆ ನಡೆಸುತ್ತಿದ್ದರಂತೆ. ಇದೇ ವಿಚಾರವಾಗಿ ತನ್ನ ಸಹೋದರನೊಂದಿಗೆ ಕರೆ ಮಾಡಿ ಮಾತನಾಡಿದ್ದು, ಅದರ ರೆಕಾರ್ಡಿಂಗ್​ ಇದೀಗ ರಿಲೀಸ್​ ಆಗಿವೆ.

ಇದನ್ನೂ ಓದಿರಿ: ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ ಮುಗಿಯುತ್ತಿದ್ದಂತೆ T20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಗಂಡನ ಮನೆಯವರ ದೌರ್ಜನ್ಯ ಹೆಚ್ಚಾಗಿದ್ದ ಸಂದರ್ಭದಲ್ಲಿ ಸುನೀಶಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದರಂತೆ. ಆದರೆ ಪೊಲೀಸರು ಈ ವೇಳೆ ಪ್ರಕರಣ ದಾಖಲು ಮಾಡಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳದೇ ಎರಡು ಕುಟುಂಬದವರನ್ನ ಕರೆದು ಸಮಾಲೋಚನೆ ನಡೆಸಲಾಗಿತು. ಇದಾದ ಬಳಿಕ ತನ್ನ ಪತಿಯೊಂದಿಗೆ ವಾಸ ಮಾಡುವುದಾಗಿ ಹೇಳಿ ಹೋಗಿದ್ದಳು ಎಂದು ತಿಳಿಸಿದ್ದಾರೆ.

Last Updated : Sep 2, 2021, 12:16 PM IST

ABOUT THE AUTHOR

...view details