ಆಗ್ರಾ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿಟ್ಟಿರುವ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಪಿಸ್ತೂಲ್ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ 30 ವರ್ಷದ ಮೋನಾ ದ್ವಿವೇದಿ ಮನೆಯಲ್ಲಿ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯೊಳಗೆ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೋಸ್ಕರ ಮೃತದೇಹ ರವಾನಿಸಿದ್ದಾರೆ. ಧೀರಜ್ ದ್ವಿವೇದಿ ಜೊತೆ ಮೋನಾ ಮದುವೆ ಮಾಡಿಕೊಂಡಿದ್ದಳು. ಇದಾದ ಬಳಿಕ ಗಂಡನ ಮನೆಯವರು ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.
ಮೋದಿಗೆ ಪತ್ರ ಬರೆದಿದ್ದ ಮಹಿಳೆ
ರಕ್ಷಣೆ ನೀಡುವಂತೆ ಮೋದಿಗೆ ಪತ್ರ ಮಹಿಳೆ ಆತ್ಮಹತ್ಯೆಗೆ ಶರಣಾಗುವುದಕ್ಕೂ ಮೊದಲು ಪ್ರಧಾನಿ ಮೋದಿಗೆ ಪತ್ರ ಬರೆದಿಟ್ಟಿದ್ದಾಳೆ. ನೀವು ನನ್ನ ಸಮಸ್ಯೆಗೆ ಪರಿಹಾರ ನೀಡುತ್ತೀರಿ ಎಂದುಕೊಂಡಿರುವೆ. ಮದುವೆಯಾದಾಗಿನಿಂದಲೂ ತುಂಬಾ ತೊಂದರೆಗೀಡಾಗಿದ್ದೇನೆ. ಗಂಡನ ಮನೆಯವರು ನನ್ನ ಮೇಲೆ ಪದೇ ಪದೇ ಹಲ್ಲೆ ನಡೆಸುತ್ತಾರೆ. ನನ್ನ ಗಂಡನ ಮನೆಯವರು ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅದೇ ಕಾರಣಕ್ಕಾಗಿ ಬೆದರಿಕೆ ಹಾಕುತ್ತಾರೆ. ಪೊಲೀಸ್ ಠಾಣೆಗೆ ತೆರಳಿದಾಗ ಪ್ರಕರಣ ದಾಖಲು ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ನನ್ನ ಸಮಸ್ಯೆ ಯಾರಿಗೂ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದೀಗ ನಿಮಗೆ ಪತ್ರ ಬರೆದಿದ್ದು, ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿಕೊಂಡಿದ್ದಾಳೆ.
ಮೋದಿಗೆ ಪತ್ರ ಬರೆದಿಟ್ಟ ಮಹಿಳೆ ಇದನ್ನೂ ಓದಿರಿ: ಗೌರಿ ಲಂಕೇಶ್ ಕೊಲೆ ಪ್ರಕರಣ : ಪ್ರಭಾವಕ್ಕೊಳಗಾಗದೇ ಜಾಮೀನು ಅರ್ಜಿ ಕುರಿತು ನಿರ್ಧರಿಸಿ ಎಂದ ಸುಪ್ರೀಂ
ನನಗೆ ಎರಡು ಸಣ್ಣ ಮಕ್ಕಳಿದ್ದು, ನನ್ನ ಗಂಡ ಬಿಟ್ಟು ಹೋಗುತ್ತಾನೆಂಬ ಕಾರಣಕ್ಕಾಗಿ ಈ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿಲ್ಲ. ಆದರೆ ಇದೀಗ ಬೇರೆ ಹಾದಿ ಇಲ್ಲದೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.