ಕರ್ನಾಟಕ

karnataka

ETV Bharat / bharat

LIVE VIDEO: ಇಬ್ಬರು ಕಂದಮ್ಮಗಳೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ - ಬಾವಿಗೆ ಹಾರಿ ಮೂವರು ಆತ್ಮಹತ್ಯೆ

ಬಿಹಾರದಲ್ಲಿ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ(well) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹೃದಯ ವಿದ್ರಾಯಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ..

NEWS FROM BIHAR
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

By

Published : Nov 21, 2021, 9:13 PM IST

Updated : Nov 21, 2021, 10:43 PM IST

ಪಾಟ್ನಾ/ಬಿಹಾರ: ಪಾಟ್ನಾ ಪಕ್ಕದ ಬಿಕ್ರಮ್ ಪೊಲೀಸ್ ಠಾಣೆ ವ್ಯಾಪ್ತಿಯ ಅಸ್ಪುರದಲ್ಲಿರುವ ಧರ್ಮಕಾಂತ್ ಬಳಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು ನಂತರ ತಾವೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ(Woman commited suicide). ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ..

ಬಿಕ್ರಂ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂವರ ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಮಧ್ಯಾಹ್ನ 12:30 ರಿಂದ 12.38ರ ಸುಮಾರಿಗೆ ಆಸ್ಪುರದಲ್ಲಿರುವ ಧರ್ಮಕಾಂತ್‌ದ ಹಿಂದಿನಿಂದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಬಂದಿದ್ದಾಳೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಇಬ್ಬರು ಪುಟಾಣಿ ಮಕ್ಕಳೊಂದಿಗೆ ಬಂದ ಮಹಿಳೆ ಮೊದಲು ಬಾವಿಯ ಬಳಿಯ ಕೈಪಂಪ್‌ನಿಂದ ನೀರು ಕುಡಿದಿದ್ದಾರೆ. ನಂತರ ಸುತ್ತಲೂ ನೋಡಿ ಆಸುಪಾಸಿನಲ್ಲಿ ಯಾರೂ ಇಲ್ಲದನ್ನ ಗಮನಿಸಿ ಬಾವಿಯ ಮೇಲೆ ಕುಳಿತು ಮೊದಲು ತನ್ನ ಇಬ್ಬರು ಮಕ್ಕಳನ್ನು ಒಬ್ಬೊಬ್ಬರಾಗಿ ಬಾವಿಗೆ ಎಸೆದು ನಂತರ ತಾನೂ ಹಾರಿ ಸಾವನ್ನಪ್ಪಿದ್ದಾಳೆ.

ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಬಿಕ್ರಮ್ ಎಸ್‌ಹೆಚ್‌ಒ ಧರ್ಮೇಂದ್ರ ಕುಮಾರ್ ಮಾತನಾಡಿ, ಬಾವಿಯಲ್ಲಿ ಮಹಿಳೆ ಮತ್ತು ಮಕ್ಕಳ ಶವಗಳು ಕಾಣಿಸುತ್ತಿವೆ ಎಂದು ಸ್ಥಳೀಯರಿಂದ ಮಾಹಿತಿ ಬಂದಿದೆ.

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತದೇಹಗಳ ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ಗುರುತು ಸಿಕ್ಕ ಬಳಿಕ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Last Updated : Nov 21, 2021, 10:43 PM IST

ABOUT THE AUTHOR

...view details