ರೈಲಿಗೆ ಬಿದ್ದು ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ - ಸೈನಿ ಕೊಟ್ವಾಲಿಯ ಅಟ್ಟಸರೈ ರೈಲು ನಿಲ್ದಾಣದ ಬಳಿ ಘಟನೆ
16:52 May 04
ರೈಲ್ವೆ ಮಾರ್ಗದಲ್ಲಿ ಮಹಿಳೆ ಸೇರಿ ಮೂರು ಅಮಾಯಕ ಮಕ್ಕಳ ಶವ ಪತ್ತೆ. 40 ವರ್ಷದ ಮಹಿಳೆಯಾಗಿರಬಹುದು ಎಂದು ಅಂದಾಜು..
ಕೌಶಾಂಬಿ (ಉತ್ತರ ಪ್ರದೇಶ):ಅಪರಿಚಿತ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಲ್ಲಿನ ಸೈನಿ ಕೊಟ್ವಾಲಿ ಪ್ರದೇಶದ ಅಟ್ಟಸರೈ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ರೈಲ್ವೆ ಹಳಿಯ ಮೇಲೆ ಮಹಿಳೆ ಸೇರಿ ಮೂರು ಅಮಾಯಕ ಮಕ್ಕಳ ಶವ ಪತ್ತೆಯಾಗಿವೆ. ಮೃತ ಮಹಿಳೆ 40 ವರ್ಷದವರಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಕ್ಕಳೊಂದಿಗೆ ರೈಲು ಬರುವಾಗಲೇ ಹಳಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಶವಗಳ ಗುರುತು ಪತ್ತೆಗೆ ಮುಂದಾದರೂ ಆತ್ಮಹತ್ಯೆ ಮಾಡಿಕೊಂಡವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.