ಕರ್ನಾಟಕ

karnataka

ETV Bharat / bharat

₹50 ಲಕ್ಷ ವರದಕ್ಷಿಣೆ ನೀಡಿದ್ರೂ ಗಂಡನ ಮನೆಯವರ ಕಿರುಕುಳ ತಪ್ಪಲಿಲ್ಲ.. ವಿದ್ಯಾವಂತ ನವ ವಿವಾಹಿತೆ ಆತ್ಮಹತ್ಯೆ.. - ಮಹಿಳೆಗೆ ವರದಕ್ಷಿಣೆ ಕಿರುಕುಳ

ಗಂಡನ ಮನೆಯವರ ವರದಕ್ಷಿಣೆ ದಾಹಕ್ಕೆ ಮದುವೆಯಾಗಿ ಕೇವಲ 8 ತಿಂಗಳಲ್ಲೇ ಎಂಬಿಎ ಪದವೀಧರೆಯೊಬ್ಬರು ನೇಣಿಗೆ ಶರಣಾಗಿದ್ದಾರೆ..​

Married woman suicide in AP
Married woman suicide in AP

By

Published : Mar 25, 2022, 7:01 PM IST

ಕಡಪ(ಆಂಧ್ರಪ್ರದೇಶ) :ಗಂಡನ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಂಧ್ರಪ್ರದೇಶದ ಕಡಪದಲ್ಲಿ ಈ ಘಟನೆ ನಡೆದಿದೆ. ಮದುವೆಯಾದ ಎಂಟು ತಿಂಗಳಲ್ಲೇ ದುರಂತ ಸಾವಿಗೀಡಾಗಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ.

ಮೃತ ಮಹಿಳೆಯ ತಂದೆ ನೀಡಿರುವ ದೂರಿನ ಮೇರೆಗೆ ಪತಿ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಪದ ವೃಂದಾವನ ಕಾಲೋನಿಯಲ್ಲಿ ವಾಸವಾಗಿದ್ದ ಯುವತಿ 2021ರ ಆಗಸ್ಟ್ ತಿಂಗಳಲ್ಲಿ ಬಾಬಾ ರೆಡ್ಡಿ ಎಂಬಾತನೊಂದಿಗೆ ಮದುವೆ ಮಾಡಿಕೊಂಡಿದ್ದಳು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ 50 ಲಕ್ಷ ರೂ. ನೀಡಲಾಗಿತ್ತು.

ಇದಾದ ಕೆಲ ದಿನಗಳಲ್ಲಿ ಗಂಡನ ಮನೆಯವರು 20 ಲಕ್ಷ ರೂ. ಹೆಚ್ಚುವರಿಯಾಗಿ ತೆಗೆದುಕೊಂಡು ಬರುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಗಂಡನ ಮನೆಯವರ ಕಿರುಕುಳ ತಾಳಲಾರದೇ ವಿವಾಹಿತೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ:ಉ.ಪ್ರದೇಶ: ಪ್ರತಿಭಟನೆ ಬಳಿಕ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ

ABOUT THE AUTHOR

...view details