ಕರ್ನಾಟಕ

karnataka

ETV Bharat / bharat

ಸೂರತ್​​ನಲ್ಲಿ ಖಾಸಗಿ ಐಷಾರಾಮಿ ಬಸ್​ಗೆ ಬೆಂಕಿ, ಮಹಿಳೆ ಸಾವು: ಪಾಲ್ಘರ್​ನಲ್ಲಿ ಎರಡು ಗ್ಯಾರೇಜ್ ಭಸ್ಮ - ಸೂರತ್​ನಲ್ಲಿ ಬೆಂಕಿಗೆ ಮಹಿಳೆ ಸಾವು

ಗುಜರಾತ್​ನ ಸೂರತ್​ನಲ್ಲಿ ಬಸ್​ನಲ್ಲಿ ಅಗ್ನಿ ಅನಾಹುತ ಉಂಟಾಗಿ ಮಹಿಳೆ ಸುಟ್ಟು ಕರಕಲಾಗಿರುವ ಘಟನೆ ನಡೆದಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.

Woman charred to death as bus catches fire in Surat
ಸೂರತ್​​ನಲ್ಲಿ ಖಾಸಗಿ ಐಷಾರಾಮಿ ಬಸ್​ಗೆ ಬೆಂಕಿ ಮಹಿಳೆ ಸಾವು: ಪಾಲ್ಘರ್​ನಲ್ಲಿ ಎರಡು ಗ್ಯಾರೇಜ್ ಭಸ್ಮ

By

Published : Jan 19, 2022, 7:01 AM IST

Updated : Jan 19, 2022, 10:56 AM IST

ಸೂರತ್(ಗುಜರಾತ್):ಖಾಸಗಿ ಐಷಾರಾಮಿ ಬಸ್‌ಗೆ ಬೆಂಕಿ ತಗುಲಿ ಹೊತ್ತಿ ಉರಿದ ಪರಿಣಾಮ ಮಹಿಳೆಯೊಬ್ಬರು ಸುಟ್ಟು ಕರಕಲಾಗಿದ್ದು, ಮತ್ತೊಬ್ಬರ ತೀವ್ರ ಸುಟ್ಟಗಾಯಗಳಿಗೆ ಒಳಗಾಗಿರುವ ಘಟನೆ ಸೂರತ್ ನಗರದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರತ್ ನಗರದ ವರಾಚಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಂಡಾಗ ಬಸ್​ನಲ್ಲಿ ಸುಮಾರು 15 ಪ್ರಯಾಣಿಕರಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸೂರತ್‌ನ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ಮಾಹಿತಿ ನೀಡಿದ್ದಾರೆ.

ಐಷಾರಾಮಿ ಬಸ್​ಗೆ ಬೆಂಕಿ

ಎಲ್ಲ ಪ್ರಯಾಣಿಕರು ಪಾರಾಗಿದ್ದು, ಬಸ್‌ನಲ್ಲಿ ಮಹಿಳೆ ಮತ್ತು ಪುರುಷ ಸಿಲುಕಿಕೊಂಡಿದ್ದರು. ಮಹಿಳೆ ಸುಟ್ಟು ಕರಕಲಾಗಿದ್ದು, ಬೆಂಕಿಯಲ್ಲಿ ಸಿಲುಕಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕೆಲವರು ಬಸ್ ಹೊರಗೆಳೆದಿದ್ದಾರೆ. ಆತನಿಗೂ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ.

ಸ್ಥಳೀಯರ ಪ್ರಕಾರ ಕಟರ್ಗಾಮ್ ಪ್ರದೇಶದಿಂದ ಭಾವನಗರದ ಕಡೆಗೆ ಬಸ್ ಪ್ರಯಾಣ ಬೆಳೆಸಿತ್ತು. ರಾತ್ರಿ 9:30 ರ ಸುಮಾರಿಗೆ ಹೀರಾಬಾಗ್ ಸರ್ಕಲ್ ತಲುಪಿದಾಗ, ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ವಾಹನದ ಎಸಿ ಕಂಪ್ರೆಸರ್‌ನಲ್ಲಿ ಸ್ಫೋಟ ಸಂಭವಿಸಿ, ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಗ್ಯಾರೇಜ್​ಗಳು ಭಸ್ಮ

ಪಾಲ್ಘರ್​​​( ಮಹಾರಾಷ್ಟ್ರ):ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿಹಾರ್​ಫಾತ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿ, ಎರಡು ಗ್ಯಾರೇಜ್​ಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ರಾತ್ರಿ ಸುಮಾರು 10 ಗಂಟೆಗೆ ಘಟನೆ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಪ್ರಾಣಾಪಾಯ ಜರುಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಲಂಡನ್​​​ನಲ್ಲಿರುವ ಮನೆಯನ್ನೂ ಕಳೆದುಕೊಂಡ ವಿಜಯಮಲ್ಯ! ಯಾಕೆ ಗೊತ್ತಾ?

Last Updated : Jan 19, 2022, 10:56 AM IST

ABOUT THE AUTHOR

...view details