ಕರ್ನಾಟಕ

karnataka

ETV Bharat / bharat

ಗರ್ಭಧರಿಸಲು ಸಾಧ್ಯವಾಗದ ಹಿನ್ನಲೆ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಿಸಿದ ಮಹಿಳೆ

ಮಹಿಳೆಯೊಬ್ಬಳು ತಮ್ಮ ತಾಯ್ತನದ ಆಸೆ ಪೂರೈಕೆಗೆ ನವಜಾತ ಶಿಶು ಕದ್ದು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

woman caught kidnapping newborn baby
woman caught kidnapping newborn baby

By ETV Bharat Karnataka Team

Published : Jan 6, 2024, 11:26 AM IST

ನವದೆಹಲಿ: ತಾಯ್ತನದ ತುಡಿತದಲ್ಲಿದ್ದ ಹಲವು ಬಾರಿ ಗರ್ಭ ಧರಿಸಲು ವಿಫಲವಾದ ಹಿನ್ನಲೆ ಮಹಿಳೆಯೊಬ್ಬಳು ನವಜಾತ ಹೆಣ್ಣು ಶಿಶುವನ್ನು ಅಪಹರಿಸಿದ ಘಟನೆ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

19 ವರ್ಷದ ಸಮಯಪುರ್​ ಬಡ್ಲಿ ಎಂಬ ಮಹಿಳೆ ರಾಷ್ಟ್ರ ರಾಜಧಾನಿಯಲ್ಲಿನ ಬಾಬಾ ಸಾಹೇಬ್​​ ಅಂಬೇಡ್ಕರ್​ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ಕೆಲವೇ ಸಮಯದಲ್ಲಿ ಹೆರಿಗೆ ಕೋಣೆಯಿಂದ ಮಗುವನ್ನು ಅಪರಿಚಿತ ಮಹಿಳೆ ಅಪಹರಿಸಿದ್ದಾರೆ ಎಂದು ಮಗು ಕಳೆದುಕೊಂಡ ತಾಯಿ ಪೊಲೀಸರಿಗ ದೂರು ನೀಡಿದ ಹಿನ್ನಲೆ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಕುರಿತು ಮಾತನಾಡಿರುವ ಪೋಲಿಸ್​ ಡೆಪ್ಯೂಟಿ ಕಮಿಷನರ್​ ರೋಹಿಣಿ ಸಿಂಗ್​​ ಸಿಧು, ಮಗು ಹುಟ್ಟಿದ ಕೆಲವೇ ಸಮಯದಲ್ಲಿ ಮಗುವನ್ನು ತಾಯಿಯಿಂದ ಅಪಹರಿಸಲಾಗಿದೆ. ಈ ಕುರಿತು ತನಿಖೆ ನಡೆಸುವಾಗ ಆಸ್ಪತ್ರೆ ಹೊರಗೆ ಅಳವಡಿಸಿದ್ದ ಸಿಸಿಟಿವಿ ಫೋಟೆಜ್​ಗಳ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮಹಿಳೆಯೊಬ್ಬಳ ಬಿಎಸ್​ಎ ಆಸ್ಪತ್ರೆಯ ಕಾರಿಡಾರ್​ನಲ್ಲಿ ನವಜಾತ ಶಿಶು ಹಿಡಿದು ತೆರಳುತ್ತಿರುವುದು ಕಂಡು ಬಂದಿದೆ.

ಈ ಮಹಿಳೆಯ ಚಲನವನ ಪತ್ತೆಗಾಗಿ ಈ ಮಾರ್ಗ ಮತ್ತು ಆಸ್ಪತ್ರೆಯ ಸುತ್ತಮುತ್ತಲಿನ 500 ಸಿಸಿಟಿವಿ ಫೋಟೆಜ್​ ಅನ್ನು ಪರಿಶೀಲಿಸಲಾಯಿತು. ಒಂದು ಸಿಸಿಟಿವಿ ಫೋಟೆಜ್​ನಲ್ಲಿ ಮೆಟ್ರೋ ಸ್ಟೇಷನ್​ ಬಳಿ, ಮಹಿಳೆ ಅಹರಿಸಿದ ಮಗುವನ್ನು ಹಿಡಿದು ಇ ರಿಕ್ಷಾ ಹತ್ತುತ್ತಿರುವುದು ಕಂಡು ಬಂದಿತು.

ಇ ರಿಕ್ಷಾವನ್ನು ಪತ್ತೆ ಮಾಡಿ, ಚಾಲಕನ ವಿಚರಣೆ ನಡೆಸಿದಾಗ ಮಹಿಳೆಯ ಸುಳಿವು ಪತ್ತೆಯಾಗಿದೆ. 23 ವರ್ಷದ ಬಾಡ್ಲಿ ನಿವಾಸಿ ಈ ಕೃತ್ಯ ಎಸಗಿರುವುದು ಕಂಡು ಬಂದಿದೆ. ಮಹಿಳೆಯು ಮಗುವನ್ನು ಹೊಂದುವ ಬಯಕೆ ವಿಫಲವಾದ ಹಿನ್ನಲೆ, ಮಗು ಹೊಂದ ಬೇಕು ಎಂಬ ಆಸೆ ಪೂರೈಕೆ ಮಾಡಲು ಈ ರೀತಿ ಮಗುವನ್ನು ಅಪಹರಿಸಿದ್ದಾಗಿ ತಿಳಿಸಿದ್ದಾರೆ. ಸದ್ಯ ಮಗುವನ್ನು ಆಕೆಯಿಂದ ಪಡೆಯಲಾಗಿದ್ದು, ಮಗುವ ಆರೋಗ್ಯಯುತವಾಗಿದೆ ಎಂದು ತಿಳಿಸಿದ್ದಾರೆ.

ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್​ ಸಮ್ಮತಿ:

ಮಾನಸಿಕ ಖಿನ್ನತೆ ಹಿನ್ನಲೆ 29 ವಾರದ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ ವಿಧವೆಯ ಮನವಿಗೆ ದೆಹಲಿ ಹೈಕೋರ್ಟ್​ ಪುರಸ್ಕರಿಸಿದ್ದು, ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ನೇತೃತ್ವದ ಪೀಠ ಇದಕ್ಕೆ ಗರ್ಭಪಾತಕ್ಕೆ ಅನುಮತಿ ನೀಡಿದೆ.

2023ರ ಫೆಬ್ರವರಿಯಲ್ಲಿ ಮದುವೆಯಾದ ಮಹಿಳೆ ಅಕ್ಟೋಬರ್​​ನಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದಳು. ಈ ವೇಳೆ ಆಕೆ 20 ವಾರಗಳ ಗರ್ಭವತಿಯಾಗಿದ್ದಳು. ಡಿಸೆಂಬರ್​ನಲ್ಲಿ ಆಕೆ ಮಾನಸಿಕ ಸ್ಥಿತಿಯು ಕುಗ್ಗಿದ್ದು, ಈ ಸಂಬಂಧ ಏಮ್ಸ್​​ ಕೂಡ ಪರಿಶೀಲನೆ ನಡೆಸಿ, ಮಹಿಳೆ ಗಂಭೀರ ಮಾನಸಿಕ ಸಮಸ್ಯೆ ಅಪಾಯ ಹೊಂದಿರುವುದಾಗಿ ವರದಿ ನೀಡಿತು. ಬಳಿಕ ಮಹಿಳೆ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು. (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್‌ರನ್ನು ರಾಜ್ಯಸಭೆಗೆ​ ಆಯ್ಕೆ ಮಾಡಿದ ಆಪ್​

ABOUT THE AUTHOR

...view details