ಮಹಿಳೆಯರ ಗರ್ಭಧಾರಣೆಯ ಸಮಯ 9 ತಿಂಗಳೆಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೂ ಕೆಲವೊಮ್ಮೆ 7 ಅಥವಾ 8 ತಿಂಗಳಿಗೇ ಮಗು ಹುಟ್ಟುತ್ತವೆ.
ಇನ್ನು ಪುರಾಣದ ವಿಚಾರಕ್ಕೆ ಹೋದರೆ, ಮಹಾಭಾರತದಲ್ಲಿ ಗಾಂಧಾರಿ ಸುಮಾರು ಎರಡು ವರ್ಷಗಳ ಕಾಲ ಗರ್ಭಿಣಿಯಾಗಿದ್ದಳು ಎಂದು ಹೇಳಲಾಗಿದೆ. ಆದರೆ, ಇಲ್ಲೊಬ್ಬ ಮಹಿಳೆ ಬರೋಬ್ಬರಿ 35 ವರ್ಷಗಳ ಕಾಲ ಗರ್ಭಿಣಿಯಾಗಿದ್ದರು ಎಂದರೆ ನೀವು ನಂಬಲೇಬೇಕಿದೆ.
ಹೌದು.., ಇದು ವಿಚಿತ್ರ ಹಾಗೂ ಬೆಚ್ಚಿ ಬೀಳಿಸುವ ಸುದ್ದಿಯಾದರೂ ಸತ್ಯ. ವೈದ್ಯಕೀಯ ವಿಜ್ಞಾನದ ಜಗತ್ತಿನಲ್ಲಿ ಅನೇಕ ಬಾರಿ ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಇದನ್ನು ಕಂಡು ವೈದ್ಯರೇ ಬೆಚ್ಚಿ ಬೀಳುತ್ತಾರೆ. ಅಲ್ಜೇರಿಯಾದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ.
ಅಲ್ಜೇರಿಯಾದ ಮಹಿಳೆಯೊಬ್ಬರಿಗೆ (ಈಗ ಅವರು 73 ವರ್ಷದ ವೃದ್ಧೆ) ಆಗಾಗ್ಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ, ಅವರಿಗೆ ಯಾವುದೇ ಅಪಾಯಕಾರಿ ಸನ್ನಿವೇಶಗಳು ಎದುರಾಗಿರಲಿಲ್ಲ.
ಕೆಲ ದಿನಗಳ ಹಿಂದೆ ಹೊಟ್ಟೆನೋವೆಂದು ಆಸ್ಪತ್ರಗೆ ಹೋದಾಗ ವೈದ್ಯರು ಎಕ್ಸ್-ರೇ ಮಾಡಿದ್ದಾರೆ. ಅವರ ಹೊಟ್ಟೆಯಲ್ಲಿ ಬೃಹತ್ ಗಾತ್ರದ ಕಲ್ಲು ಇದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: Video- ಯಮನನ್ನೇ ಸೋಲಿಸಿದ ವ್ಯಕ್ತಿ.. ಸಿಡಿಲು ಬಡಿದ್ರೂ ಬಚಾವ್ ಆದ ಭೂಪ!