ಗೋರಖ್ಪುರ (ಉತ್ತರ ಪ್ರದೇಶ):ಬೇರೆ ಜಾತಿ ಯುವಕನೊಂದಿಗೆ ಪ್ರೀತಿ ಬಲೆಗೆ ಬಿದ್ದ ಯುವತಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಜೀವಂತವಾಗಿ ಸುಟ್ಟಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಹಿಳೆಯ ತಂದೆ, ಸಹೋದರ, ಸೋದರ ಮಾವ ಹಾಗೂ ಮತ್ತೊಬ್ಬ ವ್ಯಕ್ತಿಯ ಬಂಧನ ಮಾಡಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವರುಣ್ ತಿವಾರಿ ಎಂಬ ಸುಪಾರಿ ಕೊಲೆಗಾರನಿಗೆ 1.5 ಲಕ್ಷ ರೂ. ನೀಡಿ ಯುವತಿ ಕೊಲೆ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಫೆ.4ರಂದು ಧಂಘಾಟ ಪೊಲೀಸ್ ಠಾಣಾ ವ್ಯಾಪ್ತಿಯ ಜಿಗಿನಾ ಪ್ರದೇಶದಲ್ಲಿ ಮಹಿಳೆಯ ಅರ್ಧಬರ್ಧ ಸುಟ್ಟ ಮೃತದೇಹ ಪತ್ತೆಯಾಗಿತ್ತು. ಮೃತದೇಹ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಸ್ಥಳೀಯರು ನೀಡಿದ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.