ಕರ್ನಾಟಕ

karnataka

ETV Bharat / bharat

ಕೋವಿಡ್​ ಪೀಡಿತ ಮಗುವಿಗೆ ಹಾಲುಣಿಸಿದ ತಾಯಿ.. ಹೀಗಿತ್ತು ಕರುಳ ಬಳ್ಳಿಯ ಸಂಕಟ! - ಬಿಹಾರ ಕೊರೊನಾ

ಮಹಿಳೆಗೆ ಮೊದಲ ಎರಡು ದಿನಗಳವರೆಗೆ ಪ್ರತ್ಯೇಕ ವಾರ್ಡ್‌ಗೆ ಪ್ರವೇಶ ನೀಡಿರಲಿಲ್ಲ. ಆದರೆ, ತಾಯಿಗೆ ಮಗುವನ್ನು ಬಿಟ್ಟು ಇರಲು ಮನಸ್ಸು ಬರಲೇ ಇಲ್ಲ. ಅಂತಿಮವಾಗಿ ಜೀವ ತಡೆಯದೇ ಮೂರನೇ ದಿನ ಮಗು ಇರುವ ಪ್ರತ್ಯೇಕ ವಾರ್ಡ್​ಗೆ ಧಾವಿಸಿ ಮಗುವಿಗೆ ಹಾಲುಣಿಸಿ ಧನ್ಯತಾ ಭಾವ ಪಡೆದರು.

woman-breastfeeds-her-covid-positive-infant-in-isolation-ward
ಕೋವಿಡ್​ ಪೀಡಿತ ಮಗುವಿಗೆ ಹಾಲುಣಿಸಿದ ತಾಯಿ

By

Published : Apr 16, 2021, 9:04 PM IST

ದರ್ಭಂಗ (ಬಿಹಾರ):ಕೊರೊನಾ ಸಾಂಕ್ರಾಮಿಕ ಜನರಲ್ಲಿ ಭಾರಿ ಭೀತಿಯನ್ನುಂಟು ಮಾಡಿದೆ. ಕೋವಿಡ್​ ಪಾಸಿಟಿವ್​ ಬಂದ ತಕ್ಷಣ ಅಂತಹವರನ್ನ ಭೇಟಿ ಮಾಡಲು ಕೂಡಾ ಜನ ಹಿಂದೆ ಮುಂದೆ ಮಾಡುತ್ತಿದ್ದಾರೆ.

ಆದಾಗ್ಯೂ, ಬಿಹಾರ್‌ನ ದರ್ಭಂಗ ಜಿಲ್ಲೆಯ ಈ ಮಹಿಳೆ ಕೋವಿಡ್​ ಪೀಡತ ತನ್ನ ಐದು ತಿಂಗಳ ಮಗನಿಗೆ ಹಾಲುಣಿಸುವುದನ್ನು ಮಾತ್ರ ಮರೆಯಲಿಲ್ಲ. ಮಹಿಳೆಯ 5 ತಿಂಗಳ ಮಗುವಿಗೆ ಕೊರೊನಾ ಬಂದಿರುವ ಹಿನ್ನೆಲೆಯಲ್ಲಿ, ಕಳೆದ ಮೂರು ದಿನಗಳಿಂದ ಮಗುವನ್ನ ದರ್ಭಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಡಿಎಂಸಿಎಚ್) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಿಳೆಗೆ ಮೊದಲ ಎರಡು ದಿನಗಳವರೆಗೆ ಪ್ರತ್ಯೇಕ ವಾರ್ಡ್‌ಗೆ ಪ್ರವೇಶ ನೀಡಿರಲಿಲ್ಲ. ಆದರೆ ತಾಯಿಗೆ ಮಗುವನ್ನು ಬಿಟ್ಟು ಇರಲು ಮನಸ್ಸು ಬರಲೇ ಇಲ್ಲ. ಅಂತಿಮವಾಗಿ ಜೀವ ತಡೆಯದೇ ಮೂರನೇ ದಿನ ಮಗು ಇರುವ ಪ್ರತ್ಯೇಕ ವಾರ್ಡ್​ಗೆ ಧಾವಿಸಿ ಮಗುವಿಗೆ ಹಾಲುಣಿಸಿ ಧನ್ಯತಾ ಭಾವ ಪಡೆದರು.

ಆಸ್ಪತ್ರೆಯ ಸಿಬ್ಬಂದಿ ಆ ಮಹಿಳೆಯನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಆ ತಾಯಿ ಮಾತ್ರ ಯಾರ ಮಾತನ್ನೂ ಕೇಳದೇ ಹಸಿದ ಮಗುವಿಗೆ ಹಾಲುಣಿಸಿದಳು. ಈ ಮೂಲಕ ಕೋವಿಡ್​ ಮಾರ್ಗಸೂಚಿಗಳನ್ನು ಧಿಕ್ಕರಿಸಿದ್ದಾಳೆ. ಆ ಬಳಿಕ ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕೆಂದು ಮಹಿಳೆಗೆ ಹೇಳಿದ್ದಾರೆ. ಆದರೆ, ಆ ತಾಯಿ ಮಗುವನ್ನ ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದು, ಮಗು ಗುಣಮುಖವಾಗುವವರೆಗೂ ಆಸ್ಪತ್ರೆಯಲ್ಲೇ ಇರುವುದಾಗಿ ಪಟ್ಟು ಹಿಡಿದು ಅಲ್ಲೇ ಇರಲು ನಿರ್ಧರಿಸಿದ್ದಾಳೆ.

ಈ ನಡುವೆ ಬಿಹಾರದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಸೋಂಕಿತರ ಸಂಖ್ಯೆಯನ್ನು 2.95 ಲಕ್ಷಕ್ಕೆ ತಲುಪಿದೆ.

ABOUT THE AUTHOR

...view details