ಫುಲ್ಬಾನಿ(ಒಡಿಶಾ):ಪುಲ್ಬಾನಿ ಜಗನ್ನಾಥ ದೇವಾಲಯಕ್ಕೆ 70 ವರ್ಷದ ಬಿಕ್ಷುಕಿಯೊಬ್ಬರು 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. 40 ವರ್ಷಗಳಿಂದ ಭಿಕ್ಷಾಟನೆ ಮಾಡಿ ಉಳಿಸಿದ 1 ಲಕ್ಷ ರೂಪಾಯಿಯನ್ನು ಪುಲ್ಬಾನಿ ಜಗನ್ನಾಥ ದೇವಸ್ಥಾನ ಸಮಿತಿಗೆ ಹಳೆಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
ಫುಲ್ಬಾನಿ ನಗರದ ತುಲಾ ಬೆಹೆರಾ ಎಂಬ ವೃದ್ಧ ಭಿಕ್ಷುಕಿ ಹಳೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಜಗನ್ನಾಥ ದೇವಸ್ಥಾನ ಸಮಿತಿಗೆ 1 ಲಕ್ಷ ರೂಪಾಯಿ ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ. 40 ವರ್ಷಗಳಿಂದ ಭಿಕ್ಷುಕಿ ಫುಲ್ವಾನಿ ಜಗನ್ನಾಥ ದೇವಸ್ಥಾನ, ಶಿವ ದೇವಸ್ಥಾನ ಮತ್ತು ಸಾಯಿ ದೇವಸ್ಥಾನ ಸೇರಿದಂತೆ ಭಿಕ್ಷೆ ಬೇಡುತ್ತಿದ್ದರು. ಅವರು ಮೊದಲು ಪತಿ ಪ್ರಫುಲ್ಲ ಬೆಹೆರಾ ಜೊತೆ ಭಿಕ್ಷೆ ಬೇಡುತ್ತಿದ್ದರು. ನಂತರ ತುಳಾ ಬೆಹೆರಾ ಅವರು ಉಕಿಯಾ ಮಹಾಕುಡ್ ಎಂಬ ನಿರ್ಗತಿಕ ಮಹಿಳೆಯನ್ನು ಸಾಕು ಮಗಳಾಗಿ ಇಟ್ಟುಕೊಂಡರು.