ತಿರುವನಂತಪುರಂ (ಕೇರಳ) : ಆಸ್ತಿ ವಿವಾದ ಹಿನ್ನೆಲೆ ಮಹಿಳೆಯೊಬ್ಬರ ಮೇಲೆ ಸಂಬಂಧಿಕರೇ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡದ್ದಾರೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವರ್ಕಳದ ಆಯೂರಿನಲ್ಲಿ ಘಟನೆ ನಡೆದಿದ್ದು, ಮೃತರನ್ನು ಲೀನಾಮಣಿ (56) ಎಂದು ಗುರುತಿಸಲಾಗಿದೆ.
ಲೀನಾಮಣಿ ಮತ್ತು ಅವರ ಪತಿಯ ಸಂಬಂಧಿಕರ ನಡುವೆ ಆಸ್ತಿ ವಿವಾದವಿತ್ತು. ಈ ಕಾರಣಕ್ಕಾಗಿ ಸಂಬಂಧಿಕ ಆರೋಪಿಗಳಾದ ಶಾಜಿ, ಅಹದ್ ಮತ್ತು ಮುಹ್ಸಿನ್ ಅವರು ಲೀನಾಮಣಿ ಮೇಲೆ ಇಂದು ಹಲ್ಲೆ ನಡೆಸಿ ತಕ್ಷಣ ಸ್ಥಳದಿಂದ ಪರಾರಿಯಾಗಿದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಲೀನಾಮಣಿ ಅವರನ್ನು ವರ್ಕಳದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. ಈ ಕುರಿತು ವರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ವಿಶೇಷ ತನಿಖಾ ತಂಡ ಶೋಧ ಕಾರ್ಯವನ್ನು ತೀವ್ರಗೊಳಿಸಿದೆ.
ಮಹಿಳೆಗೆ ಚಾಕು ಇರಿದು ಕೊಲೆ : ಜುಲೈ 11 ರಂದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ರೇವಣಸಿದ್ದೇಶ್ವರ್ ಕಾಲೋನಿಯ ಕೆ. ಕೆ. ನಗರದಲ್ಲಿರುವ ಮನೆಯೊಂದಕ್ಕೆ ನುಗ್ಗಿ, ಮಹಿಳೆಗೆ ಹರಿತ ಆಯುಧಗಳಿಂದ ಇರಿದು ಹತ್ಯೆ ಮಾಡಿದ್ದರು. ಜೊತೆಗಿದ್ದ ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದ್ದರು. ವಿಜಯಲಕ್ಷ್ಮೀ ಮಠ ಎಂಬುವರು ಮೃತಪಟ್ಟಿದ್ದರು. ಇವರನ್ನು ರಕ್ಷಿಸಲು ಹೋದ ನಾಲ್ವರು ಮಕ್ಕಳಾದ ಮಹಾದೇವ, ರೇಣುಕಾ, ಪಲ್ಲವಿ, ನಾಗರಾಜ ಮೇಲೂ ಹಂತಕರು ಹಲ್ಲೆ ಮಾಡಿ ಗಾಯಗೊಂಡಿದ್ದರು. ಘಟನೆಗೆ ಆಸ್ತಿ ವಿವಾದವೇ ಕಾರಣ ಎಂದು ಹೇಳಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.