ಬೆತುಲ್ (ಮಧ್ಯಪ್ರದೇಶ):ಒಂಟಿಯಾಗಿರುವುದನ್ನು ನೋಡಿ ಕಿರುಕುಳ ನೀಡಲು ಮುಂದಾಗಿದ್ದಾಗ ಯುವಕನೋರ್ವನಿಗೆ ಮಹಿಳೆಯೊಬ್ಬಳು ಮನಬಂದಂತೆ ಥಳಿಸಿ ತಕ್ಕ ಶಾಸ್ತಿ ಮಾಡಿರುವ ಘಟನೆ ಮಧ್ಯಪ್ರದೇಶದ ಬೆತುಲ್ನಲ್ಲಿ ನಡೆದಿದೆ.
ಮಾರುಕಟ್ಟೆಗೆ ಬಂದಿದ್ದ ಮಹಿಳೆ ಮರಳಿ ಮನೆಗೆ ಹೋಗುತ್ತಿದ್ದಳು. ಈ ವೇಳೆ ರಾತ್ರಿಯಾಗಿದ್ದ ಕಾರಣ ಮತ್ತು ಮಹಿಳೆ ಒಂಟಿಯಾಗಿದ್ದುದನ್ನು ಕಂಡ ಕಿಡಿಗೇಡಿ ಯುವಕನೊಬ್ಬ ಆಕೆಯನ್ನು ಚುಡಾಯಿಸಲು ಆರಂಭಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆ ಚಪ್ಪಲಿಯಿಂದ ಹೊಡೆಯಲು ಶುರು ಮಾಡಿದ್ದಾಳೆ.
ಮಧ್ಯಪ್ರದೇಶದಲ್ಲಿ ಚುಡಾಯಿಸಲು ಬಂದವನಿಗೆ ಚಪ್ಪಲಿಯಿಂದ ಬಾರಿಸಿದ ಮಹಿಳೆ ಅವನ ಮುಖ-ಮೂತಿ ನೋಡದೆ ಮನಸೋಇಚ್ಛೆ ನಡುರಸ್ತೆಯಲ್ಲೇ ಸುಮಾರು ಅರ್ಧ ಗಂಟೆ ಚಪ್ಪಲಿಯಿಂದಲೇ ಬಾರಿಸಿ ಸರಿಯಾದ ಬುದ್ಧಿ ಕಲಿಸಿದ್ದಾಳೆ. ಕೊನೆಗೆ ಆ ಯುವಕ ತಪ್ಪಾಯಿತು ಎಂದು ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಬಳಿಕ ಅವನನ್ನು ಮಹಿಳೆ ಬಿಟ್ಟು ಕಳುಹಿಸಿದ್ದಾಳೆ. ಆರೋಪಿಯೊಂದಿಗೆ ಮತ್ತೊಬ್ಬ ಯುವಕ ಕೂಡ ಇದ್ದು, ಅವನೂ ಸಹ ಮಹಿಳೆಯ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಪೊಲೀಸ್ ಇನ್ಸ್ಪೆಕ್ಟರ್ ಧಮ್ಕಿ ಆರೋಪ: ಶಾಲೆಗೆ ಹೋಗುವುದಕ್ಕೂ ಹೆದರುತ್ತಿರುವ ಬಾಲಕಿ