ಆಗ್ರಾ(ಉತ್ತರ ಪ್ರದೇಶ):ಆಗ್ರಾದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಭದ್ರತಾ ಸಿಬ್ಬಂದಿಗೆ ದೊಣ್ಣೆಯಿಂದ ಥಳಿಸಿ ನಿಂದಿಸುವ ವಿಡಿಯೋವೊಂದು ವೈರಲ್ ಆಗಿದೆ. ಎಲ್ಐಸಿಯ ವಸತಿ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ (ಮಾಜಿ ಸೈನಿಕ)ಗೆ ಅಖಿಲೇಶ್ ಎಂಬುವವರಿಗೆ ಮಹಿಳಾ ಶಿಕ್ಷಕಿ ಡಿಂಪಿ ಮಹೇಂದ್ರು ಲಾಠಿಯಿಂದ ಥಳಿಸಿ, ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಡಿಯೋ ವೈರಲ್ ಆದ ನಂತರ ಎಸ್ಪಿ ವಿಕಾಸ್ ಕುಮಾರ್ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಯನ್ನು ನಿಂದಿಸಿ ಥಳಿಸುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹಿಳೆ ಕೂಡ ತನ್ನ ರಕ್ಷಣೆಗಾಗಿ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮಹಿಳಾ ಶಿಕ್ಷಕಿ ಡಿಂಪಿ ಮಹೇಂದ್ರು ಅವರು ವಿಡಿಯೋದಲ್ಲಿ ತನ್ನನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾರೆ. ಎಲ್ಲಿ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆದರೂ ಜನರ ದೂರಿನ ಮೇರೆಗೆ ಅಲ್ಲಿಗೆ ತಲುಪುತ್ತೇನೆ. ನ್ಯೂ ಆಗ್ರಾದ ಎಲ್ಐಸಿ ಕಟ್ಟಡದಿಂದ ನನಗೆ ದೂರು ಬಂದಿತ್ತು.