ಚೆನ್ನೈ(ತಮಿಳುನಾಡು):ನಿಷೇಧಾಜ್ಞೆ ಉಲ್ಲಂಘಿಸಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಈ ವೇಳೆ ವೇಗವಾಗಿ ಓಡಿಬಂದ ಗೂಳಿಯೊಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಗೆ ಗುದ್ದಿತು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ತಿರುವಣ್ಣಾಮಲೈ ಜಿಲ್ಲೆಯ ಕೊಳತ್ತೂರ್ ಗ್ರಾಮದಲ್ಲಿ ಜನವರಿ ತಿಂಗಳ ಅಮಾವಾಸ್ಯೆಯಂದು ಜಲ್ಲಿಕಟ್ಟು ಉತ್ಸವ ಆಯೋಜಿಸಲಾಗುತ್ತದೆ. ಈ ವರ್ಷ ಜಿಲ್ಲಾಡಳಿತದ ನಿರ್ಬಂಧ ಮೀರಿ ಜನವರಿ 2ರಂದು ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ರಾಣಿಪೆಟ್ಟೈ, ಕಾಂಚೀಪುರಂ, ಕೃಷ್ಣಗಿರಿ ಸೇರಿದಂತೆ ಅನೇಕ ಜಿಲ್ಲೆಯ ಸಾವಿರಾರು ಗೂಳಿಗಳು ಭಾಗಿಯಾಗಿದ್ದವು.