ಮುಂಬೈ: ಪತ್ನಿ ಹಾಗೂ ಪ್ರಿಯಕರ ಸೇರಿಕೊಂಡು ಪತಿಯನ್ನೇ ಕೊಂದಿರುವ ಪ್ರಕರಣ ಮುಂಬೈಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಬಟ್ಟೆ ವ್ಯಾಪಾರಿ ಪತಿ ಕಮಲ್ಕಾಂತ ಶಾ ಎಂಬ ಹತ್ಯೆಗೀಡಾದ ದುರ್ದೈವಿ. ಆರೋಪಿಗಳಾದ ಪತ್ನಿ ಕವಿತಾ ಹಾಗೂ ಪ್ರಿಯಕರ ಹಿತೇಶ್ ಜೈನ ನ್ನೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹತ್ಯೆ ಸಂಚು ಹೇಗೆ?:ಪೊಲೀಸ್ ಮಾಹಿತಿ ಪ್ರಕಾರ, ಸಾಂತಾಕ್ರೂಜ್ ಪಶ್ಚಿಮ ನಿವಾಸಿ ಮೃತ ಕಮಲ್ಕಾಂತ್ ಶಾ (45) 2002ರಲ್ಲಿ ಕವಿತಾ (45)ರನ್ನು ವಿವಾಹ ಆಗಿದ್ದರು. ಆರೋಪಿ ಹಿತೇಶ್ ಜೈನ್ ಕಮಲ್ಕಾಂತ್ ಸ್ನೇಹಿತನಾಗಿದ್ದನು, ಇಬ್ಬರೂ ಸೇರಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಈ ಮೊದಲೇ ಹಿತೇಶ್‌ನ ಪರಿಚಯವಿದ್ದ ಕವಿತಾ ದಶಕದ ಹಿಂದೆ ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ದಂಪತಿ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿತ್ತು, ಇದಕ್ಕಾಗಿ ಪತಿ - ಪತ್ನಿ ಆಗಾಗ್ಗೆ ಜಗಳ ಮಾಡುತ್ತಿದ್ದರು.
ಜೂನ್ 2022 ರಲ್ಲಿ ಕಮಲ್ಕಾಂತ್ ಅವರ ತಾಯಿ ನಿಧನ ಬಳಿಕ ಹಿತೇಶ್ ಜೈನ್ ಮತ್ತು ಕವಿತಾ ಷಾ ಸೇರಿಕೊಂಡು ಕಮಲ್ಕಾಂತ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಆಸ್ತಿ ಲಪಾಟಿಯಿಸಲು ಯೋಜನೆ ರೂಪಿಸಿದರು. ದಿನಗಳೂ ಕಳೆದಂತೆ ಸಂಶಯ ಬಾರದಂತೆ ಸ್ನೇಹಿತ ಹಾಗೂ ಪತ್ನಿ ಸೇರಿಕೊಂಡು ಕಮಲ್ಕಾಂತ್ ಆಹಾರ ಸೇವನೆಯಲ್ಲಿ ಆರ್ಸೆನಿಕ್ ಎಂಬ ಪದಾರ್ಥ ವಿಷ ಬೆರೆಸಲು ಪ್ರಾರಂಭಿಸಿದರು. ಈ ಪದಾರ್ಥದಿಂದ ಸ್ಲೋ ಪಾ ಯಿಷನ್ ಉಂಟಾಗಿ ಕಾಲಕ್ರಮೇಣ ಕಮಲ್ಕಾಂತರ ಆರೋಗ್ಯ ತೀವ್ರ ಹದಗೆಡಲು ಶುರುವಾಯಿತು. ಕಮಲ್ಕಾಂತರ ಶಾ ಅವರನ್ನೂ ಆರಂಭದಲ್ಲಿ ಆಗಸ್ಟ್ 27 ರಂದು ಅಂಧೇರಿ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು.