ಮಿರ್ಜಾಪುರ (ಉತ್ತರಪ್ರದೇಶ) : ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ರೈಲಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಿರ್ಜಾಪುರದ ವಿಂಧ್ಯಾಚಲ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ 1:30ರ ಸುಮಾರಿಗೆ ನಡೆದಿದೆ.
ಈ ಸಂದರ್ಭ ತಕ್ಷಣ ಲೋಕೋ ಪೈಲೆಟ್ ರೈಲಿನ ಬ್ರೇಕ್ ಹಾಕಿದ್ದು, ರೈಲಿನ ನಾಲ್ಕು ಬೋಗಿಗಳು ಅವರ ಮೇಲೆ ಹಾದುಹೋಗಿವೆ. ಆಗ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ರೈಲಿನಡಿ ಸಿಲುಕಿದ್ದ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ವಿಂಧ್ಯಾಚಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಆರ್ಪಿ ಅಧಿಕಾರಿ ರಾಜೇಂದ್ರ ಪ್ರಸಾದ್ ಯಾದವ್, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸೀಮಾ ಸಿಂಗ್ ಪಟೇಲ್ ಎಂದು ಗುರುತಿಸಲಾಗಿದೆ. ಇವರು ಅಜಂಗಢ ಪೊಲೀಸ್ ಠಾಣಾ ವ್ಯಾಪ್ತಿಯ ಗಂಭೀರ್ಪುರದ ಬಿದಿಪುರ್ ಗ್ರಾಮದ ನಿವಾಸಿಯಾಗಿದ್ದಾರೆ.
ಮಗುವಿನೊಂದಿಗೆ ರೈಲಿಗೆ ಹಾರಿದ ಮಹಿಳೆ ಅದೃಷ್ಟವಶಾತ್ ಪಾರು ಗುರುವಾರ ತಡರಾತ್ರಿ ತಮ್ಮ ಮಗುವಿನೊಂದಿಗೆ ಮನೆಯಿಂದ ಹೊರಬಂದಿರುವುದಾಗಿ ಮಹಿಳೆಯ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲದೆ ಈ ಮಹಿಳೆ ಮತ್ತು ಮಗುವಿನ ಬಗ್ಗೆ ಕುಟುಂಬದವರು ಗಂಭೀರ್ಪುರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಆರೋಗ್ಯ ಕೇಂದ್ರದಲ್ಲಿ ನರ್ಸ್ ಕೈಕಾಲು ಕಟ್ಟಿಹಾಕಿ ದುರುಳರಿಂದ ಸಾಮೂಹಿಕ ಅತ್ಯಾಚಾರ!