ಫರಿದಾಬಾದ್(ಹರಿಯಾಣ):ಫೋನ್ನಲ್ಲಿ ಮಾತನಾಡುವಾಗ ಅನೇಕ ಅವಾಂತರಗಳು ಸಂಭವಿಸಿರುವ ಘಟನೆ ಈಗಾಗಲೇ ನಮ್ಮ ಮುಂದೆ ನಡೆದಿದ್ದು, ಸದ್ಯ ಅಂತಹ ಮತ್ತೊಂದು ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ಮೊಬೈಲ್ನಲ್ಲಿ ಮಾತನಾಡ್ತಿದ್ದ ಮಹಿಳೆಯೊಬ್ಬಳು ಮಗುವಿನೊಂದಿಗೆ ಮ್ಯಾನ್ಹೋಲ್ನಲ್ಲಿ ಬಿದ್ದಿದ್ದಾಳೆ.
ಹರಿಯಾಣದ ಜವಾಹರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಚಿಕ್ಕ ಮಗು ಹೊತ್ತುಕೊಂಡು ಫೋನ್ನಲ್ಲಿ ಮಾತನಾಡುತ್ತ ತೆರಳುತ್ತಿದ್ದ ಮಹಿಳೆಯೋರ್ವಳು ಏಕಾಏಕಿಯಾಗಿ ಮ್ಯಾನ್ ಹೋಲ್ನಲ್ಲಿ( ತೆರೆದ ಚರಂಡಿ) ಬಿದ್ದಿದ್ದಾರೆ. ಇದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ. ಘಟನಾ ಸ್ಥಳದಲ್ಲಿ ಸೇರಿದ್ದ ಕೆಲವರು ತಕ್ಷಣವೇ ಮಹಿಖೆ ಹಾಗೂ ಮಗುವನ್ನ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.