ನಿಜಾಮಾಬಾದ್(ತೆಲಂಗಾಣ):ದೇಶದ ವಿವಿಧೆಡೆ ಕಳೆದ ಕೆಲವು ತಿಂಗಳಿಂದ ಸಾಮೂಹಿಕ ಅತ್ಯಾಚಾರದಂತಹ ಅಮಾನೀಯ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ.
ಹೈದರಾಬಾದ್ನ ನಿಜಾಮಾಬಾದ್ನ ಖಾಸಗಿ ಆಸ್ಪತ್ರೆಯಲ್ಲೇ ಮಹಿಳೆಯೋರ್ವಳ ಮೇಲೆ ನಾಲ್ವರು ಅಪರಿಚಿತರು ಅತ್ಯಾಚಾರವೆಸಗಿದ್ದಾರೆ. ದುಷ್ಕೃತ್ಯವೆಸಗುವುದಕ್ಕೂ ಮುಂಚಿತವಾಗಿ ಆಕೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿದ್ದು ತಿಳಿದುಬಂದಿದೆ.
ಇದನ್ನೂ ಓದಿ:ಐಪಿಎಲ್ ಬೆಟ್ಟಿಂಗ್.. 93 ಲಕ್ಷ ರೂ. ನಗದು, 2.2 ಕೋಟಿ ರೂ. ಮೌಲ್ಯದ ಆಸ್ತಿ ಸೇರಿ 23 ಬುಕ್ಕಿಗಳ ಬಂಧನ..
ಕಳೆದ ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಆಸ್ಪತ್ರೆಯ ಕೊಠಡಿಯಲ್ಲಿ ನಾಲ್ವರು ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಶೋಧ ಆರಂಭಿಸಿದ್ದು, ಸ್ಥಳೀಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡುತ್ತಿದ್ದಾರೆ. ಮಹಿಳೆಯನ್ನು ಆಸ್ಪತ್ರೆಯ ಕೊಠಡಿಗೆ ಕಾಮುಕರು ಯಾವ ರೀತಿಯಾಗಿ ಕರೆದುಕೊಂಡು ಹೋಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.