ಭೋಪಾಲ್(ಮಧ್ಯಪ್ರದೇಶ): ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ದೇಶದಲ್ಲಿ ನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬಹುತೇಕ ರಾಜ್ಯದ ಆಸ್ಪತ್ರೆಗಳಲ್ಲಿ ಔಷಧ, ಬೆಡ್ ಹಾಗೂ ಆ್ಯಂಬುಲೆನ್ಸ್ ಸಮಸ್ಯೆ ಉಂಟಾಗಿದೆ.
ಮಧ್ಯಪ್ರದೇಶದ ದಾಮೋದಲ್ಲಿ ಕುಟುಂಬವೊಂದು ಮೃತ ಮಹಿಳೆಯ ಶವವನ್ನ ಬಂಡಿಯ ಮೇಲಿಟ್ಟುಕೊಂಡು ಸಾಗಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ 45 ವರ್ಷದ ಮಹಿಳೆಯೊಬ್ಬಳನ್ನು ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಸರಿಯಾದ ವೈದ್ಯಕೀಯ ಆರೈಕೆ ಇಲ್ಲದ ಕಾರಣ ಅವರು ಸಾವನ್ನಪ್ಪಿದ್ದಾರೆ.