ನವದೆಹಲಿ: ಏರ್ ಇಂಡಿಯಾ ಮಾಲೀಕತ್ವವನ್ನು ಅಧಿಕೃತವಾಗಿ ವಹಿಸಿಕೊಂಡ ನಂತರ ಟಾಟಾ ಗ್ರೂಪ್ ಜಾಗತಿಕವಾಗಿ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಧಿಕೃತವಾಗಿ ಗುರುವಾರ ಟಾಟಾ ಗ್ರೂಪ್ ಸೇರಿಕೊಂಡಿದೆ. ಇದು 200ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದೆ. ಟಾಟಾ ಗ್ರೂಪ್, ವಿಸ್ತಾರಾ ಮತ್ತು ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಏಷ್ಯಾ ಇಂಡಿಯಾ ಎಂಬ ಏರ್‌ಲೈನ್‌ಗಳನ್ನು ನಿರ್ವಹಣೆ ಮಾಡುತ್ತಿರುವುದು ಗಮನಾರ್ಹ.
ಮೂಲಗಳ ಪ್ರಕಾರ, ವಿವಿಧ ಮಾರುಕಟ್ಟೆ ವಿಭಾಗಗಳಲ್ಲಿ ಸ್ಪರ್ಧಿಸಲು ತನ್ನ ಎಲ್ಲಾ ವಿಮಾನಯಾನ ಸಂಸ್ಥೆಗಳ ನಡುವೆ ಪೈಲಟ್ ಸಿನರ್ಜಿಗಳನ್ನು ಯೋಜಿಸಿದೆ ಎನ್ನಲಾಗಿದೆ. ಕಳೆದ 90 ವರ್ಷಗಳ ಹಿಂದೆ ಏರ್ ಇಂಡಿಯಾ ಟಾಟಾ ಗ್ರೂಪ್ನಿಂದ ಆರಂಭಗೊಂಡಿತ್ತು.