ಔರಂಗಾಬಾದ್(ಮಹಾರಾಷ್ಟ್ರ):ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡ್ತಿದ್ದ ವೇಳೆ ಕರೆಂಟ್ ಹೊಡೆದಿರುವ ಪರಿಣಾಮ ಆತ ಕೆಳಗೆ ಬಿದ್ದಿರುವ ಘಟನೆ ನಡೆದಿದೆ.
ಲೈಟ್ ಕಂಬ ಏರಿ ಕೆಲಸ ಮಾಡ್ತಿದ್ದಾಗ ಹೊಡೆದ ಕರೆಂಟ್ ಶಾಕ್.. ಕೆಳಗೆ ಬಿದ್ದ ವ್ಯಕ್ತಿ! ವಿಡಿಯೋ - ಔರಂಗಾಬಾದ್ ಇತ್ತೀಚಿನ ಸುದ್ದಿ
ವಿದ್ಯುತ್ ಕಂಬ ಏರಿ ಕೆಲಸ ಮಾಡ್ತಿದ್ದ ವೇಳೆ ಏಕಾಏಕಿ ಶಾಕ್ ಹೊಡೆದಿರುವ ಕಾರಣ ಆತ ಕೆಳಗೆ ಬಿದ್ದಿರುವ ಘಟನೆ ನಡೆದಿದ್ದು, ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
Wireman falls from electricity poll at Aurangabad
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಕಂಬ ಏರಿದ ವ್ಯಕ್ತಿ ಗಾಯಗೊಂಡಿದ್ದಾನೆ. ವಾಜ್ ಎಂಬ ಪ್ರದೇಶದಲ್ಲಿನ ಕಂಪೂರ್ ರಸ್ತೆಯಲ್ಲಿ ಒಳಚರಂಡಿ ಮಾರ್ಗದ ಕೆಲಸ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬನಿಗೆ ವಿದ್ಯುತ್ ಕೆಲಸದ ಗುತ್ತಿಗೆ ನೀಡಲಾಗುತ್ತು. ವಿದ್ಯುತ್ ಕಂಬ ಏರಿ ಕೆಲಸ ಮಾಡ್ತಿದ್ದ ವೇಳೆ ಆತನಿಗೆ ಶಾಕ್ ಹೊಡೆದಿದ್ದು, ಅಲ್ಲಿಂದ ಕೆಳಗೆ ಬಿದ್ದಿದ್ದಾನೆ.
ಆತ ಕೆಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Last Updated : Apr 19, 2021, 4:10 PM IST