ಹೈದರಾಬಾದ್(ತೆಲಂಗಾಣ):ವಿಮಾನಯಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ನಡೆಯುತ್ತಿರುವ 'ವಿಂಗ್ಸ್ ಇಂಡಿಯಾ ಎಕ್ಸ್ಪೋ'ಗೆ ಹೈದರಾಬಾದ್ನ ಬೇಗಂಪೇಟ್ ವಿಮಾನ ನಿಲ್ದಾಣ ಸಜ್ಜಾಗಿದೆ. ಈ ಕಾರ್ಯಕ್ರಮವನ್ನು ಇದೇ 18ರಿಂದ 21ರವರೆಗೆ ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ ಅತ್ಯಾಧುನಿಕ ವಿಮಾನಗಳು ಕಾಣಸಿಗಲಿವೆ. ಹೆಚ್ಚಿನ ಜನರನ್ನು ವಾಯುಯಾನಕ್ಕೆ ಸೆಳೆಯುವುದು, ಈ ವಲಯದಲ್ಲಿನ ಅವಕಾಶಗಳ ಬಗ್ಗೆ ಉದ್ಯಮಿಗಳು ಮತ್ತು ಉದಯೋನ್ಮುಖ ಉದ್ಯಮಗಳಲ್ಲಿ ಜಾಗೃತಿ ಮೂಡಿಸುವುದು ಇದರ ಹಿಂದಿರುವ ಉದ್ದೇಶವಾಗಿದೆ.
ವಿಮಾನಯಾನ ಕ್ಷೇತ್ರದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. 1,748 ವಿದೇಶಿ ವಿಮಾನಗಳ ಜೊತೆಗೆ 1,440 ದೇಶೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಇನ್ನೂ ಸಾವಿರ ವಿಮಾನಗಳು ಸೇರುವ ನಿರೀಕ್ಷೆಯಿದೆ. 2028ರ ವೇಳೆಗೆ ದೇಶಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ 3 ಕೋಟಿ ಮೀರುವ ನಿರೀಕ್ಷೆ ಇದೆ. ಪ್ರಸ್ತುತ ದೇಶದಲ್ಲಿ 184 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.
ಇನ್ನೊಂದು ವರ್ಷದಲ್ಲಿ ಸುಮಾರು 40 ಹೊಸ ವಿಮಾನ ನಿಲ್ದಾಣಗಳನ್ನು ಪ್ರವೇಶಿಸಲು ಕೇಂದ್ರ ಆಶಿಸುತ್ತಿದೆ. ಕೃಷಿ ಉಡಾನ್ 2.0 ಯೋಜನೆಯಡಿ ಈಗಾಗಲೇ ದೇಶದ 29 ರಾಜ್ಯಗಳಿಗೆ ವಿಮಾನ ಸೌಲಭ್ಯ ಒದಗಿಸಲಾಗಿದೆ. ವಿದೇಶದಿಂದ ವೈದ್ಯಕೀಯ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಿದೆ. 21 ರಷ್ಟು ಬೆಳವಣಿಗೆ ಕಾಣುತ್ತಿದೆ. ಹತ್ತು ವರ್ಷಗಳ ಅವಧಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಮತ್ತು ವಿಮಾನಯಾನ ಕ್ಷೇತ್ರದಿಂದ ಆದಾಯ 119 ಬಿಲಿಯನ್ ಡಾಲರ್ಗಳಿಂದ 270 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ವಿಮಾನಯಾನ ಸಂಸ್ಥೆಗಳು ಅವಕಾಶಗಳನ್ನು ನೀಡಲು ಮುಂದೆ ಬರುತ್ತಿವೆ.