ಲಂಡನ್: ಸಾನಿಯಾ ಮಿರ್ಜಾ ಮತ್ತು ಅವರ ಜೊತೆಗಾರ ಮೇಟ್ ಪಾವಿಕ್ ಅವರು ನಾಲ್ಕನೇ ಶ್ರೇಯಾಂಕದ ಕೆನಡಾ-ಆಸ್ಟ್ರೇಲಿಯನ್ ಜೋಡಿಯಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಮತ್ತು ಜಾನ್ ಪೀರ್ಸ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ವಿಂಬಲ್ಡನ್ 2022 ರ ಸೆಮಿಫೈನಲ್ಗೆ ಕಾಲಿಟ್ಟಿದ್ದಾರೆ.
ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಮೇಟ್ ಪಾವಿಚ್ 6-4, 3-6, 7-5 ಸೆಟ್‌ಗಳಿಂದ ಗೇಬ್ರಿಯೆಲಾ ಡಬ್ರೊವ್ಸ್ಕಿ ಮತ್ತು ಜಾನ್ ಪಿಯರ್ಸ್ ಅವರನ್ನು ಸೋಲಿಸಿದ್ದಾರೆ. ಈ ಇಂಡೋ-ಕ್ರೊಯೇಟ್ ಜೋಡಿ ರಾಬರ್ಟ್ ಫರಾ ಮತ್ತು ಜೆಲೆನಾ ಒಸ್ಟಾಪೆಂಕೊ ಅವರನ್ನು ಸೆಮಿಫೈನಲ್ನಲ್ಲಿ ಎದುರಿಸಲಿದೆ.
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ವಿಂಬಲ್ಡನ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದು, ಸಾನಿಯಾ ಮತ್ತು ಮೇಟ್ ಜೋಡಿ ಟೂರ್ನಿಯಲ್ಲಿ ಆರನೇ ಶ್ರೇಯಾಂಕಿತರಾಗಿದ್ದಾರೆ.